ಶ್ರಾವಣ ಮಾಸದ ಅಂಗವಾಗಿ ಶ್ರೀನಿವಾಸ ಕಲ್ಯಾಣೋತ್ಸವ ಸಹಸ್ರಾರು ಭಕ್ತರ ಹರ್ಘೋದ್ಘಾರದ ನಡುವೆ ನಡೆಯಿತು.
ಆನೇಕಲ್ ಪಟ್ಟಣದಲ್ಲಿ ಅದ್ದೂರಿಯಾಗಿ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು.
ಲೋಕ ಕಲ್ಯಾಣಾರ್ಥವಾಗಿ ಜಯಕರ್ನಾಟಕ ಸಂಘಟನೆಯಿಂದ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಸಾವಿರಾರು ಜನರು ಭಾಗವಹಿಸಿ ಲಕ್ಷ್ಮಿ ಹಾಗೂ ಪದ್ಮಾವತಿ ಸಮೇತ ಶ್ರೀನಿವಾಸನ ಕಲ್ಯಾಣವನ್ನ ಕಣ್ಣು ತುಂಬಿಕೊಂಡರು. ಸಾಕ್ಷತ್ ತಿರುಪತಿಯ ಮಾದರಿಯಲ್ಲೇ ನಡೆದ ಕಾರ್ಯಕ್ರಮ ಭಕ್ತರಿಗೆ ವಿಶೇಷ ಅನುಭವ ತಂದುಕೊಟ್ಟಿತ್ತು.
ತಿರುಪತಿ ಮಾದರಿಯಲ್ಲೇ ದೇವಾಲಯದ ಸೆಟ್ ಗಳನ್ನ ಹಾಕಿ ಆಗಮಿಕರು ವೆಂಕಟೇಶ್ವರನ ಕಲ್ಯಾಣವನ್ನ ನಡೆಸಿಕೊಟ್ಟರು.
ಧಾರ್ಮಿಕ ಕಾರ್ಯಗಳು ಎಲ್ಲಾ ಕಡೆ ನಡೆದು ಅವುಗಳಿಂದ ಸುಖ, ಶಾಂತಿ, ನೆಮ್ಮದಿ ವೃದ್ದಿಯಾಗಲಿ ಎಂದು ಕಾರ್ಯಕ್ರಮ ಸಂಘಟಕರು ಹಾರೈಸಿದರು.
ತಿರುಮಲ ದೇವಾಲಯ ಬಂದಿದ್ದ ಆಗಮಿಕರು ಶಾಸ್ತ್ರೋಕ್ತವಾಗಿ ವೆಂಕಟೇಶ್ವರ ಸ್ವಾಮಿ ಕಲ್ಯಾಣ ಕಾರ್ಯಕ್ರಮ ನಡೆಸಿಕೊಡುತ್ತಿದ್ದರೆ, ಭಕ್ತರು ಗೋವಿಂದ , ಗೋವಿಂದ ನಾಮಸ್ಮರಣೆ ಮಾಡುತ್ತ ಶ್ರೀನಿವಾಸನನ್ನ ತಮ್ಮ ಇಷ್ಟಾರ್ಥಗಳನ್ನ ನೆರವೇರಿಸುವಂತೆ ಬೇಡಿಕೊಂಡರು.