ಕಂಠೀರವ ಸ್ಟೇಡಿಯಂನಲ್ಲಿ ಭರದಿಂದ ಸಾಗ್ತಿರೋ ಸ್ಟೇಜ್ ಸಿದ್ಧತಾ ಕೆಲಸ

ಶುಕ್ರವಾರ, 19 ಮೇ 2023 (19:30 IST)
ನಾಳೆ ನೂತನ ಸಿಎಂ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ ಕಂಠೀರವ ಸ್ಟೇಡಿಯಂನಲ್ಲಿ  ಸ್ಟೇಜ್ ಸಿದ್ಧತಾ ಕೆಲಸ ಭರದಿಂದ ಸಾಗಿದೆ.ಸಿಎಂ ಪ್ರಮಾಣವಚನಕ್ಕೆ ಸ್ಟೇಜ್ ಸಿದ್ಧತೆಯಾಗಿದ್ದು.ಎಲ್ ಇಡಿ ಬ್ಯಾಕ್ ಗ್ರೌಂಡ್, ಸ್ಟೇಜ್ ಮತ್ತು ಸ್ಟೇಜ್ ನ ಮುಂಭಾಗ ರೆಡ್ ಕಾರ್ಪೊರೇಟ್ ಹಾಕಿ ವ್ಯವಸ್ಥೆ ಮಾಡಲಾಗಿದೆ.ಸ್ಟೇಜ್ ಎಡಭಾಗ ಮತ್ತು ಬಲಬಾಗ ಇನ್ನೂರಕ್ಕೂ ಹೆಚ್ಚು ಸೀಟ್ ಗಳ ವ್ಯವಸ್ಥೆ ಮಾಡಲಾಗಿದೆ.
 
ಅತಿಥಿಗಳ ಕುಟುಂಬ, ಪಿ.ಎ, ಆಪ್ತ ಸಹಾಯಕರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.ಸ್ಟೇಡಿಯಂನಲ್ಲಿ ಸುಮಾರು 35ಸಾವಿರ ಜನರಿಗೆ ಆಸನದ ವ್ಯವಸ್ಥೆಗೆ ಸಿದ್ಧತೆ‌‌ ಮಾಡಲಾಗಿದೆ.ಈಗಾಗಲೇ ಅಧಿಕಾರಿಗಳಿಗೆ ಡಿ.ಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.ಕಾರ್ಯಕ್ರಮ ವ್ಯವಸ್ಥೆಯ ಪ್ರತಿ ಹಂತದ ಬಗ್ಗೆ ವಿವರಣೆ ನೀಡಿದ್ದಾರೆ.
 
ರಾಷ್ಟ್ರೀಯ ನಾಯಕರು, ಬೇರೆ ಬೇರೆ ರಾಜ್ಯದ ಮುಖ್ಯಮಂತ್ರಿಗಳು ಭಾಗಿ ಹಿನ್ನೆಲೆ‌ಗ್ರ್ಯಾಂಡ್ ಆಗಿ ಸ್ಟೇಜ್ ರೆಡಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಹೀಗಾಗಿ ಸ್ಟೇಜ್ ಬಳಿ ಸಂಪೂರ್ಣ ರೆಡ್ ಕಾರ್ಪರೇಟ್ ಹಾಕಿ ವೇದಿಕೆ ಸಜ್ಜುಗೊಳಿಸಲಾಗಿದೆ.ನಾಳೆ ಕೇಂದ್ರ ನಾಯಕರು ಭಾಗಿ ಹಿನ್ನೆಲೆ Zಕ್ಯಾಟಗರಿ, ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್,ಅಡ್ವಾನ್ಸ್ ಸೆಕ್ಯೂರಿಟಿ ಲೈಸನಿಂಗ್ ಸಿಬ್ಬಂದಿಯಿಂದ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿದೆ.ಈಗಾಗಲೇ ಸ್ಟೇಜ್ ಬಳಿ  ಬಂದು  ಹೈ ಸೆಕ್ಯೂರಿಟಿ ಸಿಬ್ಬಂದಿ ಪರೀಶಿಲನೆ ನಡೆಸಿದ್ದಾರೆ.ಡಾಗ್ ಸ್ಕ್ವಾಡ್ ನಿಂದ ನಿಂದ ಸ್ಟೇಜ್ ಸುತ್ತಮುತ್ತ ಪರಿಶೀಲನೆ ನಡೆಸಲಾಗಿದ್ದು,ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ವಾಡ್, ಸಿಆರ್ ಪಿಎಫ್ ಸಿಬ್ಬಂದಿಯಿಂದ ಪರಿಶೀಲನೆ ನಡರಸಲಾಗ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ