ಆಟೋಗಳ ಜಪ್ತಿ ಕಾರ್ಯಾಚರಣೆ ಶುರು

ಗುರುವಾರ, 19 ಸೆಪ್ಟಂಬರ್ 2019 (22:10 IST)
ಕಲಬುರಗಿ ಮಹಾನಗರದಲ್ಲಿ ಪರವಾನಿಗೆ ಇಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ  ಅಟೋಗಳು ರಸ್ತೆಯಲ್ಲಿ
ಸಂಚರಿಸುತ್ತಿರುವುದು ಗಮನಕ್ಕೆ ಬಂದಿದ್ದು, ಸೆ.25ರ ನಂತರ ಅಂತಹ ಆಟೋಗಳನ್ನು ಪತ್ತೆ ಹಚ್ಚಿ ಕಾನೂನಿನ ಅನ್ವಯ ಮುಟ್ಟುಗೋಲು ಹಾಕಿಕೊಳ್ಳಲು ಕಾಯಾಚರಣೆ ನಡೆಸಲಾಗುವುದು.

ಹೀಗಂತ ಕಲಬುರಗಿ ನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ ಖಡಕ್ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ಮಾತನಾಡಿ, ಪರವಾನಿಗೆ ಇಲ್ಲದ ಆಟೋಗಳ ಹಾವಳಿ ಹೆಚ್ಚಾಗಿದ್ದು ಇದನ್ನು ನಿಯಂತ್ರಿಸುವುದು ಅವಶ್ಯಕವಾಗಿದೆ ಅಂತ ಹೇಳಿದ್ರು.

ಜಿಲ್ಲಾಧಿಕಾರಿ ಬಿ.ಶರತ್, ಕಲಬುರಗಿ ರೈಲು ನಿಲ್ದಾಣದಲ್ಲಿ ಪ್ರಿಪೇಡ್ ಕೇಂದ್ರ ಸ್ಥಾಪನೆ
ಕುರಿತಂತೆ ಅಧಿಕಾರಿಗಳ ತಂಡ ನಿಲ್ದಾಣಕ್ಕೆ ಭೇಟಿ ನೀಡಿ ಇಂದಿನ ದಿನಮಾನಕ್ಕೆ ಅನ್ವಯಾಗುವದಂತೆ ದರ ನಿಗದಿಪಡಿಸಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸುವಂತೆ ಆರ್.ಟಿ.ಓ ಅಧಿಕಾರಿಗಳಿಗೆ ಸೂಚಿಸಿದ್ರು.

15 ವರ್ಷ ಪೂರೈಸಿದ ಶಾಲಾ-ಕಾಲೇಜು ಮತ್ತು ಸಾರಿಗೆ ಬಸ್ಸುಗಳಿಗೆ ಪರವಾನಿಗೆ ನವೀಕರಣ ಮಾಡದಂತೆ ಸಭೆ ಸೂಚಿಸಿತು. ಇನ್ನೂ ಹೊಸದಾಗಿ ಯಾವುದೇ ಆಟೋಗಳಿಗೆ ಪರವಾನಿಗೆ ನೀಡಲು ಸಭೆ ಒಪ್ಪಿಗೆ ಸೂಚಿಸಲಿಲ್ಲ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ