ಸುಳ್ವಾಡಿ ವಿಷ ಪ್ರಸಾದ ಪ್ರಕರಣ: ಆಸ್ಪತ್ರೆಗೆ ಸಚಿವರ ಭೇಟಿ

ಮಂಗಳವಾರ, 18 ಡಿಸೆಂಬರ್ 2018 (15:09 IST)
ಬಿಜಿಎಸ್ ಅಪೋಲೋ ಆಸ್ಪತ್ರೆಗೆ ಸಚಿವ ಪುಟ್ಟರಂಗಶೆಟ್ಟಿ ಭೇಟಿ ನೀಡಿದ್ದಾರೆ.

ಸುಳ್ವಾಡಿ ಮಾರಮ್ಮ ದೇವಿ ದೇವಸ್ಥಾನದಲ್ಲಿ ವಿಷಾಹಾರ ಸೇವಿಸಿ ಅಸ್ವಸ್ಥತಗೊಂಡು ಚಿಕಿತ್ಸೆ ಪಡೆಯುತ್ತಿರುವವ ಆರೋಗ್ಯವನ್ನು ವಿಚಾರಿಸಿದರು  ಪುಟ್ಟರಂಗಶೆಟ್ಟಿ.

ಸದ್ಯಕ್ಕೆ ಯಾವುದೇ ಡಿಸ್ ಜಾರ್ಜ್ ಇಲ್ಲ. ಸಂಪೂರ್ಣವಾಗಿ ಗುಣಮುಖರಾಗುವ ತನಕ ಡಿಸ್ ಜಾರ್ಜ್ ಬೇಡವೆಂದು ವೈದ್ಯರಿಗೆ  ತಿಳಿಸಿದ್ದೇನೆ‌. ಚಿಕಿತ್ಸೆ ಪಡೆಯುತ್ತಿರುವವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಅಸ್ವಸ್ಥರು ಸಂಪೂರ್ಣವಾಗಿ ಗುಣಮುಖರಾಗಬೇಕು. ಈಗಾಗಲೇ ಪ್ರತಿಯೊಂದು ಕುಟುಂಬಕ್ಕೂ ಸರ್ಕಾರದಿಂದ ಐದು ಲಕ್ಷ ಪರಿಹಾರ ನೀಡಿದ್ದೇವೆ. ವೈಯಕ್ತಿಕವಾಗಿಯೂ ನಮ್ಮ‌ ಕೈಲಾದಷ್ಟು ಪರಿಹಾರ ನೀಡಿದ್ದೇವೆ. ಆರೋಪಿಗಳನ್ನು ಸಹ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ವಿಷಯವನ್ನ ಸದನದಲ್ಲಿಯೂ ಚರ್ಚೆ ಮಾಡಲಾಗಿದೆ. ಮುಂದೆ ಬೇಕಾಗುವ ಎಲ್ಲಾ ಕ್ರಮಗಳನ್ನು ತೆಗದುಕೊಳ್ಳಲಾಗುವುದು ಎಂದು ಹೇಳಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ