ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಸ್ಪರ್ಧಿಸುವ ಇಚ್ಚೆ ಹೊತ್ತ ಬಿಜೆಪಿ ನಾಯಕ ಯಾರು ಗೊತ್ತಾ?
ಸೋಮವಾರ, 28 ಜನವರಿ 2019 (07:21 IST)
ಬೆಂಗಳೂರು : ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ಸ್ಪರ್ಧಿಸಬೇಕು ಎಂಬ ಇಚ್ಛೆ ಇದೆ ಎಂದು ಕ್ಷೇತ್ರದ ಹಾಲಿ ಸಂಸದ, ಕೇಂದ್ರ ಸಚಿವ ಸದಾನಂದಗೌಡ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡ್ರು ಸ್ಪರ್ಧಿಸ್ತಾರೆ ಎನ್ನುವ ಚರ್ಚೆ ಎದ್ದಿದೆ. ಸದ್ಯ ದೇವೇಗೌಡರೇ ಚುನಾವಣೆಗೆ ನಿಲ್ಲಬೇಕು. ಅವರ ವಿರುದ್ಧ ಸ್ಪರ್ಧಿಸಬೇಕು ಎಂಬುವುದು ನನ್ನ ಇಚ್ಛೆ ಎಂದು ತಿಳಿಸಿದ್ದಾರೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡ ಅವರು, ‘ಚುನಾವಣೆಯ ಸ್ಥಾನಗಳ ಹಂಚಿಕೆ, ಸ್ಪರ್ಧೆ ಬಗ್ಗೆ ಅಂತಿಮವಾಗಿಲ್ಲ. ಅದೆಲ್ಲಾ ಮುಂದೆ ನೋಡೋಣ. ಜೊತೆಗೆ, ಬಿಬಿಎಂಪಿ ಮಹಾನಗರ ಪಾಲಿಕೆಯಂತಹ ಚುನಾವಣೆಗಳಲ್ಲಿ ಹೊಂದಾಣಿಕೆ ಕಷ್ಟ. ಆ ಕಾರಣಕ್ಕಾಗಿ ಏಕಾಂಗಿ ಸ್ಪರ್ಧೆ ಬಗ್ಗೆ ನಿರ್ಧಾರ ಮಾಡಿದ್ದೇವೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ