ಆಕ್ಸಿಜನ್ ಖರೀದಿ: ಟೀಕೆ ಮಾಡೋರಿಗೆ ತಿರುಗೇಟು ಕೊಟ್ಟ ಸುಮಲತಾ

ಭಾನುವಾರ, 9 ಮೇ 2021 (09:47 IST)
ಮಂಡ್ಯ: ತಮ್ಮ ಸ್ವಕ್ಷೇತ್ರದಲ್ಲಿ ಆಕ್ಸಿಜನ್ ಖರೀದಿ ಮಾಡಿಕೊಟ್ಟ ಕುರಿತಂತೆ ಟೀಕೆ ಮಾಡುತ್ತಿರುವ ಜೆಡಿಎಸ್ ನಾಯಕರಿಗೆ ಸಂಸದೆ ಸುಮಲತಾ ಅಂಬರೀಶ್ ತಿರುಗೇಟು ನೀಡಿದ್ದಾರೆ.


ಇಂತಹಾ ಸಂಕಷ್ಟದ ಸಮಯದಲ್ಲೂ ಆಕ್ಸಿಜನ್ ವಿಚಾರವಾಗಿ ಟೀಕೆ ಮಾಡ್ತಿರೋದು ಹೇಸಿಗೆಯಾಗ್ತಿದೆ. ಇಂತಹ ಸಮಯದಲ್ಲಿ ಆಕ್ಸಿಜನ್ ಸಿಗುತ್ತಿರುವುದೇ ದೊಡ್ಡ ವಿಚಾರ. ಹಾಗಾಗಿ ಹೆಚ್ಚುವರಿ ಖರ್ಚು ಭರಿಸಿತ್ತಿರುವೆ. ಅದಕ್ಕೆ ಬೇಕಾದ ಸಾಕ್ಷ್ಯಗಳೂ ಇವೆ.

ಆದರೆ ಈ ಸಂದರ್ಭದಲ್ಲಿಯೂ ಕೆಲವರು ರಾಜಕೀಯ ಮಾಡುವುದನ್ನು ಬಿಟ್ಟು ಜನರಿಗೆ ನೆರವಾಗಲು ನನ್ನ ಜೊತೆ ಕೈ ಜೋಡಿಸಲಿ. ಸಾಂಕ್ರಾಮಿಕ ರೋಗಕ್ಕೇ ನಾಚಿಕೆಯಾಗುವಂತೆ ಮಾತನಾಡಬೇಡಿ ಎಂದು ಸುಮಲತಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಶಾಸಕರಾದ ರವೀಂದ್ರ ಶ್ರೀಂಕಠಯ್ಯ, ಸುರೇಶ್ ರೆಡ್ಡಿ ಸುಮಲತಾ ಆಕ್ಸಿಜನ್ ಖರೀದಿಗೆ ತಮ್ಮ ಹಣ ಭರಿಸಿದ್ದಾರೆಂದು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪ ಮಾಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ