ಬಿಬಿಎಂಪಿ ಚುನಾವಣೆ ಸಂಬಂಧ ಇಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಮಂಗಳವಾರ, 10 ಮೇ 2022 (20:44 IST)
ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ನಡೆದ ಅರ್ಜಿಯಲ್ಲಿ ನಮೂದಿಸಿರು ವಂತೆ ಎಲ್ಲ ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಎಲೆಕ್ಷನ್ ಕಮಿಷನ್ ಗೆ ಆದೇಶ ನೀಡಿದೆ.ಈ ವಿಚಾರವಾಗಿ ಬಿಬಿಎಂಪಿ ಚುನಾವಣೆ ನಡೆಸಲು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದ ಬಿಬಿಎಂಪಿ ಮಾಜಿ ಸದಸ್ಯರಾದ ಎಂ ಶಿವರಾಜ್ ಅವ್ರು ಹೇಳಿಕೆ.ಸುಪ್ರೀಂ ಕೋರ್ಟಿನ ತೀರ್ಪು ಪಾಲಿಸಬೇಕಾದ ಅನಿವಾರ್ಯತೆ ಈಗ ರಾಜ್ಯ ಸರ್ಕಾರಕ್ಕೆ ಎದುರಾಗಿದೆ.
 
ನಾವು ಹಾಕಿದ ಕೇಸ್ ಇನ್ನೂ  ಕೋರ್ಟ್ ಮುಂದೆ ಬಂದಿಲ್ಲ ಮಧ್ಯ ಪ್ರದೇಶ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಇಂದು ಕೋರ್ಟ್ ಮಹತ್ವದ ತೀರ್ಪು ನೀಡಿದೆ.ಅದರಂತೆ ಎಲ್ಲ ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಎಲೆಕ್ಷನ್ ಕಮಿಷನ್ ಗೆ ಆದೇಶ ಹೊರಡಿಸಿದೆ
 
ಈ ವಿಚಾರವಾಗಿ ಈಗಾಗಲೇ ರಾಜ್ಯ ಸರ್ಕಾರ ನಾವು ಬಿಬಿಎಂಪಿ ಚುನಾವಣೆ ನಡೆಸಲು ಸಿದ್ಧ ಎಂದು ಹೇಳಿದೆ. 
ಇದರ ಜೊತೆಗೆ ಒಬಿಸಿ ಮೀಸಲಾತಿಗೆ ರಾಜ್ಯ ಸರ್ಕಾರ ಕಮಿಟಿ ರಚಿಸಿದ್ದು, ಅದರ ಕುರಿತಾದ ಹೆಚ್ಚಿನ ಮಾಹಿತಿ ಕೂಡ ಸರ್ಕಾರ ಕಲೆ ಹಾಕಲು ಭಕ್ತ ವತ್ಸಲ ಕಮಿಟಿ ರಚಿಸಿದೆ.
 
ರಾಜ್ಯ ಸರ್ಕಾರ ಪ್ರತಿ ಬಾರಿ ಏನಾದ್ರೂ ಒಂದು ಕಾರಣ ಹೇಳಿ ನುಣಚಿ ಕೊಳ್ಳುತ್ತಾ ಬರುತ್ತಿದೆ.ಆದ್ರೆ ಈಗಾಗಲೇ ಇಡೀ ಬೆಂಗಳೂರು ಗೆ ಸರಿಯಾದ ಆಡಳಿತ ವ್ಯವಸ್ಥೆ ಇಲ್ಲದೆ ಆಯೋಮಯವಾಗಿದೆ.ರಾಜ್ಯ ಸರ್ಕಾರ ಈಗಾಗಲೇ ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಎಲ್ಲಿ ಚುನಾವಣೆ ನಡೆದರೆ ಸಿಟಿ ಸುಣ್ಣವಾಗುತ್ತೇವೆ ಎಂದು ಹೆದರಿ  ಚುನಾವಣೆ ಮುಂದೂಡುತ್ತ ಬರುತ್ತಿದೆ.ನಾವು ಈ ತೀರ್ಪಿನ ಬಗ್ಗೆ ನಮ್ಮ ಸಿಎಲ್ಪಿ ನಾಯಕರು ಹಾಗೂ ಕೆಪಿಸಿಸಿ  ಅಧ್ಯಕ್ಷರು ಹಾಗೂ ಹಿರಿಯ ಪಕ್ಷದ ನಾಯಕರು ಸೇರಿ ಮಾತುಕತೆ ನಡೆಸಿ ಮುಂದಿನ ಕ್ರಮ ತಿಳಿಸಲಾಗುವುದು ಎಂದು ಮಾಜಿ ಬಿಬಿಎಂಪಿ ನಿಕಟ ಪೂರ್ವ ಆಡಳಿತ ಪಕ್ಷದ ನಾಯಕರು ಹಾಗೂ ಶಂಕರ ಮಠ ವಾರ್ಡ್ ಬಿಬಿಎಂಪಿ ಸದಸ್ಯ ಶಿವರಾಜ್ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ