ಸಾಲದ ರೂಪದಲ್ಲಿ ಪಡೆದ 500 ರೂಪಾಯಿ ಕೊಡಲು ವಿಳಂಬ ಮಾಡಿದ್ದಕ್ಕೆ ವ್ಯಕ್ತಿಯೋರ್ವ ತನ್ನ ಸ್ನೇಹಿತನ ಹೆಂಡತಿಯನ್ನೇ ತನ್ನೊಟ್ಟಿಗೆ ಕರೆದೊಯ್ದು ಮದುವೆ ಆಗಿರುವ ವಿಚಿತ್ರ ಘಟನೆಯೊಂದು ನಡೆದಿದೆ.
ಬೆಳಗಾವಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಬಸವರಾಜ್, ಪತ್ನಿ ಕಳೆದುಕೊಂಡ ಪತಿ. ಗೋಕಾಕ ತಾಲೂಕಿನ ಗ್ರಾಮದ ಮಿಡಕನಟ್ಟಿಯ ರಮೇಶ ಹುಕ್ಕೇರಿ ಎಂಬಾತ ಈ ಕೃತ್ಯ ಎಸಗಿದ ಆರೋಪಕ್ಕೆ ಗುರಿಯಾಗಿದ್ದಾನೆ. ಬೈಲಹೊಂಗಲ ತಾಲೂಕಿನ ಮುರಕಿಬಾವಿ ಗ್ರಾಮದ ಬಸವರಾಜ ಕೋನನ್ನವರ ಎಂಬಾತನ ಪತ್ನಿ ಪಾರ್ವತಿಯ ಜೊತೆ ರಮೇಶ ಹುಕ್ಕೇರಿ ವಿವಾಹವಾಗಿದ್ದಾನೆ.
ವಿಪರ್ಯಾಸವೆಂದರೆ ರಮೇಶನಿಗೆ ಈ ಮೊದಲೇ ವಿವಾಹವಾಗಿದ್ದು, ತನ್ನ ಪತ್ನಿಯನ್ನು ಈತ ತವರು ಮನೆಗೆ ಕಳುಹಿಸಿ, ಪಾರ್ವತಿಯ ಜತೆಗೆ ಸಂಸಾರ ಮಾಡುತ್ತಿದ್ದಾನೆ. ಪತ್ನಿ ಕಾಣೆಯಾಗಿರುವ ಬಗ್ಗೆ ಬಸವರಾಜ ಕೋಣನ್ನವರ ದೂರು ಕೊಡಲು ಮುಂದಾದರೂ ಪೊಲೀಸರು ದಾಖಲಿಸಿಕೊಳ್ಳುತ್ತಿಲ್ಲವಂತೆ. ಈ ಹಿನ್ನೆಲೆಯಲ್ಲಿ ಬಸವರಾಜ್ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ನನಗೆ ನನ್ನ ಹೆಂಡತಿ ಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದಾರೆ.
ಸ್ನೇಹಿತನಿಗೆ ದೋಖಾ; ಪತ್ನಿಗೂ ಮೋಸ!
ಬಸವರಾಜ್ ಪತ್ನಿ, ರಮೇಶ ಹಾಗೂ ಬಸವರಾಜ ಇಬ್ಬರೂ ಈ ಮೊದಲು ಬೆಳಗಾವಿಯ ಹೋಟೆಲ್‌ವೊಂದರಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದಾಗ, ಇಬ್ಬರಿಗೂ ಪರಿಚಯವಾಗಿತ್ತು. ಬಸವರಾಜ ಪತ್ನಿ ಕೂಡ ಇದೆ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆಗ ರಮೇಶ್ನಿಗೆ ಪಾರ್ವತಿ ಪರಿಚಯವಾಗಿದೆ. ಹಣದ ಅವಶ್ಯಕತೆ ಎದುರಾದಾಗ ಬಸವರಾಜ, ರಮೇಶ ಬಳಿ 500 ರೂಪಾಯಿ ಸಾಲ ಪಡೆದಿದುಕೊಂಡಿದ್ದ. ಆದರೆ ಬಸವರಾಜನಿಗೆ ಹಣ ಕೊಡಲು ಸ್ವಲ್ಪ ವಿಳಂಬವಾಗಿದೆ. ಈ ಕಾರಣದಿಂದಾಗಿ ರಮೇಶ ಹುಕ್ಕೇರಿ, ಬಸವರಾಜ ಪತ್ನಿ ಪಾರ್ವತಿಯನ್ನು ಕರೆದೊಯ್ದಿದ್ದಾನೆ. ಈ ಬಗ್ಗೆ ಪ್ರಶ್ನಿಸಿದರೆ ನನಗೆ ಬೆದರಿಕೆ ಹಾಕುತ್ತಿದ್ದಾನೆ ಎಂಬುವುದು ಬಸವರಾಜ ಅವರ ಆರೋಪ ಮಾಡುತ್ತಿದ್ದಾನೆ.