ಮತ್ತೆ 50 ಟಿಎಂಸಿ ನೀರಿಗಾಗಿ ತಮಿಳುನಾಡು ಕ್ಯಾತೆ!

ಶುಕ್ರವಾರ, 23 ಸೆಪ್ಟಂಬರ್ 2016 (16:38 IST)
ಕಾವೇರಿ ಮೇಲುಸ್ತುವಾರಿ ಸಮಿತಿ ತೀರ್ಮಾನಕ್ಕೆ ತಮಿಳುನಾಡು ಸರಕಾರ ಆಕ್ಷೇಪಣೆ ಸಲ್ಲಿಸಿದ್ದು, ಮತ್ತೆ ಕಾವೇರಿ ನದಿಯಿಂದ 50 ಟಿಎಂಸಿ ನೀರು ಬಿಡುವಂತೆ ತಕರಾರು ಎತ್ತಿದೆ.
 
ಕಾವೇರಿ ನದಿಯಿಂದ ತಮಿಳುನಾಡಿಗೆ ಹರಿಸುತ್ತಿರುವ 3 ಸಾವಿರ ಕ್ಯೂಸೆಕ್ ನೀರು ಸಾಂಬಾ ಬೆಳೆಗೆ ಸಾಕಾಗಲ್ಲ. ತಮಿಳುನಾಡಿಗೆ ಸೆಪ್ಟೆಂಬರ್ ಅಂತ್ಯದೊಳಗೆ 17.5 ಟಿಎಂಸಿ ನೀರಿನ ಅಗತ್ಯವಿದೆ ಎಂದು ತಮಿಳುನಾಡು ಆಕ್ಷೇಪಣೆ ಎತ್ತಿದೆ.
 
ಕರ್ನಾಟಕ ಕೃಷಿಗಾಗಿ ಕಾವೇರಿ ನೀರನ್ನು ಬಳಸಿಕೊಳ್ಳುತ್ತಿದೆ. ಅವರಿಗೆ ತಮಿಳುನಾಡಿಗೆ ನೀರು ಬಿಡಲು ಇಷ್ಟವಿಲ್ಲ. ಹೀಗಾಗಿ ಅವರು ಕಾವೇರಿ ಜಲಾಶಯದಲ್ಲಿ ನೀರಿನ ಕೊರತೆ ಇದೆ ಎಂದು ಹೇಳುತ್ತಿದ್ದಾರೆಂದು ಆರೋಪಿಸಿ ಸುಪ್ರೀಂಕೋರ್ಟ್‌ಗೆ ಆಕ್ಷೇಪಣೆ ಸಲ್ಲಿಸಿದೆ. 
 
ಕಾವೇರಿ ಮೇಲುಸ್ತುವಾರಿ ಸಮಿತಿ ತೀರ್ಮಾನಿಸಿದಂತೆ 3 ಸಾವಿರ ಕ್ಯೂಸೆಕ್ ನೀರು ಯಾವುದಕ್ಕೂ ಸಾಲುವುದಿಲ್ಲ. ತಕ್ಷಣವೇ ಕಾವೇರಿಯಿಂದ ತಮಿಳುನಾಡಿಗೆ ನೀರು ಹರಿಸುವಂತೆ ಕರ್ನಾಟಕ ಸರಕಾರಕ್ಕೆ ನಿರ್ದೇಶನ ನೀಡಿ ಎಂದು ತಮಿಳುನಾಡು ಮನವಿ ಮಾಡಿಕೊಂಡಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ