ಪೊಲೀಸ್ ಇನ್ಸ್ಪೆಕ್ಟರ್ ಪ್ರವೀಣ್ ಗೆ ಉರುಳಾಗುವ ಸಾಧ್ಯತೆ..!

ಸೋಮವಾರ, 9 ಜನವರಿ 2023 (18:44 IST)
ಈಗ ಎಲ್ಲಿ ನೋಡಿದ್ರೂ ಸ್ಯಾಂಟ್ರೊ ರವಿಯದ್ದೇ ಚರ್ಚೆ.ಕುಮಾರಸ್ವಾಮಿ ಸ್ಯಾಂಟ್ರೊ ರವಿಯ ಬಾಂಬ್ ಸಿಡಿಸಿದ್ದೇ ಎಲ್ಲರ ಬಾಯಲ್ಲು ಅದೇ ಮಾತು.  ಸ್ಯಾಂಟ್ರೋ ರವಿಯ ವಿರುದ್ಧ ಆತನ ಪತ್ನಿ ಮಾಡಿರುವ ಆರೋಪ ಈಗ ಪೊಲೀಸ್ ಇನ್ಸ್ಪೆಕ್ಟರ್ ಪ್ರವೀಣ್ ಗೆ ಉರುಳಾಗುವ ಸಾಧ್ಯತೆ ದಟ್ಟವಾಗಿದೆ. ಸ್ಯಾಂಟ್ರೋ ರವಿಯ ಷಡ್ಯಂತ್ರದಿಂದ ಕಾಟನ್ ಪೇಟೆ ಠಾಣೆಯಲ್ಲಿ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು‌ ಮೈಸೂರಿನ ವಿಜಯ ನಗರ ಠಾಣೆಯಲ್ಲಿ ಆತನ ಪತ್ನಿ ರಶ್ಮಿ ದೂರು ನೀಡದ್ದರು. ದೂರಿನನ್ವಯ ಅಂದಿನ ಕಾಟನ್ ಪೇಟೆ ಇನ್ಸ್ಪೆಕ್ಟರ್ ಪ್ರವೀಣ್ ವಿರುದ್ಧ ಇಲಾಖಾ ತನಿಖೆ ನಡೆಸಿ ವರದಿ ನೀಡುವಂತೆ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿಗೆ ಆದೇಶಿಸಲಾಗಿತ್ತು. ಸದ್ಯ ತನಿಖೆ ಪೂರ್ಣಗೊಂಡಿದ್ದು ವರದಿ ಡಿಜಿ & ಐಜಿಪಿ ಪ್ರವೀಣ್ ಸೂದ್ ಕೈ ಸೇರಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
 
ಇನ್ನೂ ದೂರಿನ ಸಾರಾಂಶ ಏನೂ ಅಂತ ನೋಡೋದಾದ್ರೆ.ಪ್ರಕಾಶ್ ಎಂಬುವವರು ನೀಡಿದ್ದ ದೂರಿನನ್ವಯ ಕಾಟನ್ ಪೇಟೆ ಠಾಣೆಯಲ್ಲಿ ನವೆಂಬರ್ 24ರಂದು ರಶ್ಮಿ, ನಯನ ಹಾಗೂ ಶೇಕ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿತ್ತು.ಮೂರು ತಿಂಗಳ ಅವಧಿಗೆ ಐದು ಲಕ್ಷ ರೂ ಪಡೆದಿದ್ದ ರಶ್ಮಿ, ನವೆಂಬರ್ 23ರಂದು ಸಂಜೆ 6ಗಂಟೆಗೆ ಹಣ ಕೊಡುವುದಾಗಿ ಕಾಟನ್ ಪೇಟೆಯ ಖೋಡೆ ಸರ್ಕಲ್ ಬಳಿ ಕರೆಸಿಕೊಂಡಿದ್ದರು. ಈ ವೇಳೆ ರಶ್ಮಿಯವರ ಜೊತೆಗಿದ್ದ ಶೇಕ್ ಎಂಬುವವನು ತಮ್ಮ ಎರಡೂ ಕೈಗಳನ್ನು ಹಿಂದಿನಿಂದ ಗಟ್ಟಿಯಾಗಿ ಹಿಡಿದುಕೊಂಡಿದ್ದು, ರಶ್ಮಿ ತಮ್ಮ ಬಳಿಯಿದ್ದ ಚಾಕುವನ್ನ ಕುತ್ತಿಗೆಯ ಮೇಲಿಟ್ಟು ಬೆದರಿಸಿದ್ದಾರೆ. ಹಾಗೂ ಜೊತೆಗಿದ್ದ ನಯನ ಎಂಬಾಕೆ ತನ್ನ ಕತ್ತಿನಲ್ಲಿದ್ದ ಸುಮಾರು 13ಗ್ರಾಂ ತೂಕದ ಚಿನ್ನದ ಚೈನು 9 ಸಾವಿರ ರೂಗಳನ್ನ ಕಿತ್ತುಕೊಂಡು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ' ಎಂದು ಪ್ರಕಾಶ್ ದೂರು ನೀಡಿದ್ದರು
ಇನ್ನೂ ಇದ್ರಲ್ಲಿ ಸತ್ಯಾಸತ್ಯತೆ ಏನೂ ಅಂತ ಅಧಿಕಾರಿಗಳು ಕಲೆ ಹಾಕಿದ್ದು,ಇಲಾಖಾ ತನಿಖೆ ನಡೆಸಿರುವ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ  'ಕೃತ್ಯ ನಡೆದ ಸ್ಥಳದಲ್ಲಿ ರಶ್ಮಿ ಹಾಗೂ ನಯನ ಇರಲಿಲ್ಲ. ಘಟನೆ ನಡೆದ ಸ್ಥಳದಲ್ಲಿ ರಶ್ಮಿ ಹಾಗೂ ನಯನ ಇರುವಂತೆ ಸಾಬೀತು ಮಾಡಲು ಸ್ಯಾಂಟ್ರೋ ರವಿಯೇ ತನ್ನ ಕೆಲಸಗಾರ ಶೇಕ್ ಜೊತೆಯಲ್ಲಿ ರಶ್ಮಿ ಮೊಬೈಲ್  ಕೊಟ್ಟು ಕಳುಹಿಸಿದ್ದ. ನಯನ ಕೃತ್ಯ ನಡೆದ ದಿನ ಮೈಸೂರಲ್ಲಿದ್ರು. ಇಬ್ರೂ ಕೂಡ ಸ್ಪಾಟ್ ನಲ್ಲಿ ಇರಲೇ ಇಲ್ಲ. ಸೂಕ್ತ ತನಿಖೆ ನಡೆಸದೇ ಕಾಟನ್ ಪೇಟೆ ಇನ್ಸ್ಪೆಕ್ಟರ್  ಪ್ರವೀಣ್ ಸುಳ್ಳು ಎಫ್ಐಆರ್ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಸ್ಯಾಂಟ್ರೋ ರವಿಯ ಷಡ್ಯಂತ್ರದ ಜೊತೆಗೆ ಕಾಟನ್ ಪೇಟೆ ಠಾಣೆಯ ಅಂದಿನ  ಇನ್ಸ್ಪೆಕ್ಟರ್ ಪ್ರವೀಣ್ ರ ಕರ್ತವ್ಯ ಲೋಪ ಎದ್ದು ಕಾಣುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ವರದಿ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ