ವೀರಮರಣವನ್ನೊಪ್ಪಿದ 5 ಜನ ಯೋಧರ ಕುಟುಂಬಕ್ಕೆ ನಿವೇಶನ ಹಂಚಿಕೆ ಮಾಡಿದ ಬಿ.ಡಿ.ಎ

ಮಂಗಳವಾರ, 28 ಸೆಪ್ಟಂಬರ್ 2021 (20:09 IST)
ಬೆಂಗಳೂರು: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಶಿಫಾರಸ್ಸಿನಂತೆ ಗಡಿ ಕಾಯುವ  ಯೋಧರು ವೀರಮರಣ ಹೊಂದಿದಲ್ಲಿ ಅಥವಾ ತೀವ್ರ ತೆರವಾಗಿ ಗಾಯಗೊಂಡ ಯೋಧರ ಕುಟುಂಬಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಉಚಿತ ನಿವೇಶನ ನೀಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಹಿಂದೆ ಇಬ್ಬರು ವೀರ ಯೋಧರ  ಕುಟುಂಬಗಳಿಗೆ ಸಾಂಕೇತಿಕವಾಗಿ ನಿವೇಶನ ಹಂಚಿಕೆ ಮಾಡಿದ್ದರು.
 
ನಗರದ  5 ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ನಿರ್ಧರಿಸಲಾಗಿತ್ತು ಈ ಹಿನ್ನಲೆಯಲ್ಲಿ  ಮಂಗಳವಾರ ಯೋಧರಾದ ಲಾನ್ಸ್ ನಾಯಕ್ ಕೆ.ಎಮ್ ನಾಗೇಂದ್ರಕುಮಾರ್ ರ ತಾಯಿ ಸರೋಜಮ್ಮ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಆಯುಕ್ತ ರಾಜೇಶ್ ಗೌಡ ಹಾಗೂ ಕಾರ್ಯದರ್ಶಿ ಆನಂದ ಹಕ್ಕು ಪತ್ರ ವಿತರಿಸಿದರು.
 
ಇನ್ನುಳಿದ ಎರಡು ಕುಟುಂಬಗಳಿಗೆ ನೊಂದಾಯಿತ ಅಂಚೆಯ ಮೂಲಕ ಹಕ್ಕುಪತ್ರಗಳನ್ನು ತಲುಪಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ