ಹುಂಡಿಯಲ್ಲದೆ ಹಾಸನಾಂಬೆಗೆ ಟಿಕೆಟ್, ಲಡ್ಡು ಪ್ರಸಾದದಲ್ಲಿ ಹರಿದು ಬಂದ ಆದಾಯ ಕೇಳಿದ್ರೆ ಶಾಕ್

Sampriya

ಮಂಗಳವಾರ, 21 ಅಕ್ಟೋಬರ್ 2025 (17:47 IST)
Photo Credit X
ಹಾಸನ: ಹಾಸನಾಂಬ ದೇವಿ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಭಕ್ತರ ದಂಡು ದೌಡಾಯಿಸುತ್ತಿದೆ. ಇದೀಗ ಹಾಸನಾಂಬ ದೇಗುಲದಲ್ಲಿ ಕೇವಲ ಟಿಕೆಟ್ ಹಾಗೂ ಲಡ್ಡು ಪ್ರಸಾದದಲ್ಲಿ ದಾಖಲೆಯ ಆದಾಯ ಸೇರಿದೆ.  

11 ದಿನಗಳಲ್ಲಿ ದೇಗುಲಕ್ಕೆ ₹20 ಕೋಟಿ ಆದಾಯ ಹರಿದುಬಂದಿದೆ. ಟಿಕೆಟ್ ಮಾರಾಟ ಹಾಗೂ ಲಡ್ಡು ವಿತರಣೆಯಿಂದ 11ದಿನದಲ್ಲಿ ₹20ಕೋಟಿ ಬಂದಿದೆ. ಇನ್ನು ಹುಂಡಿ ಕಾಣಿಕೆಯನ್ನು ಇದುವರೆಗೆ ಎಣಿಸಲಿಲ್ಲ. 

ಇನ್ನೂ ಹಾಸನಾಂಬ ದೇವಿ ದರ್ಶನಕ್ಕೆ ನಾಳೆಯವರೆಗೆ ಅವಕಾಶವಿದ್ದು, ನಾಳೆ ಭಾರೀ ಭಕ್ತರು ಆಗಮಿಸುವ ಸಾಧ್ಯತೆಯಿದೆ. ಇನ್ನೂ ಗುರುವಾರ ದೇವಾಲಯಕ್ಕೆ ಬೀಗ ಬೀಳಲಿದ್ದು, ಭಕ್ತರಿಗೆ ದರ್ಶನಕ್ಕೆ ಯಾವುದೇ ಅವಕಾಶವಿರುವುದಿಲ್ಲ. 

ನಾಳೆ 6 ಗಂಟೆಯಿಂದ ಸಂಜೆಯವರೆಗೆ ಯಾವುದೇ ಅಡೆತಡೆಯಿಲ್ಲದೆ ನಿರಂತರ ಭಕ್ತರ ದರ್ಶನಕ್ಕೆ ದೇಗುಲ ತೆರೆಯುತ್ತದೆ. ಇನ್ನೂ ರಾತ್ರಿ ಮತ್ತೇ 12 ಗಂಟೆಗೆ ತೆರೆದು ಬೆಳಿಗ್ಗೆ 5 ಗಂಟೆಯವರೆಗೆ ದರ್ಶನವಿರುತ್ತದೆ.  ಇದು ಹಾಸನದ ಸ್ಥಳೀಯರಿಗೆ ಈ ದರ್ಶನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ