ಗುಳೇದಗುಡ್ಡ ಪಟ್ಟಣದ ನಿವಾಸಿಗಳಾದ ಸೋಮಶೇಖರ್ ಹಳ್ಳೂರ, ಮಲ್ಲಿಕಾರ್ಜುನ ತೋರಗಲ್, ಈರಣ್ಣ ಹಾದಿಮನಿ ಬಂಧಿತ ಆರೋಪಿಗಳಾಗಿದ್ದು, ಮರಿಯಪ್ಪ ಮಾದರ ಎಂಬ ಆರೋಪಿ ಪರಾರಿಯಾಗಿದ್ದಾನೆ. ಈ ನಾಲ್ವರು ಸೇರಿ ನೋಟಿನಾಕಾರದ ಕಪ್ಪು ಕಾಗದವನ್ನು ಜನರಿಗೆ ನೀಡಿ ಇದಕ್ಕೆ ನಾವು ಕೊಡುವ ಲಿಕ್ವಿಡ್ ಹಾಕಿದ್ರೆ ಅಸಲಿ 500 ಹಾಗೂ 2000 ಮುಖಬೆಲೆಯ ನೋಟು ಆಗುತ್ತೆ ಎಂದು ಜನರನ್ನು ವಂಚಿಸುತ್ತಿದ್ದರು.
ಗುಳೇದಗುಡ್ಡ ಪಟ್ಟಣದ ಶಿಕ್ಷಕರ ಕಾಲೋನಿಯಲ್ಲಿ ನಡೆಯುತ್ತಿದ್ದ ಈ ದಂದೆಯ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ 2 ಸಾವಿರ ರೂ. ಮುಖಬೆಲೆಯ ಎರಡು ಖೋಟಾ ನೋಟನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣ ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.