ಸಿದ್ದು ಸ್ಪರ್ಧೆಗಾಗಿ ಅಭಿಮಾನಿ ಹರಕೆ
ರಾಜ್ಯದಲ್ಲಿ ಚುನಾವಣಾ ತಯಾರಿ ಆರಂಭವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಪಕ್ಷದೊಳಗೆ ಒಳ ಜಗಳವಿದೆ. ಬೆಳಗಾವಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮಾನಿಯೊಬ್ಬ ಸಿದ್ದು ಗೆದ್ದು ಸಿಎಂ ಆಗಬೇಕೆಂದು ಹರಕೆ ಹೊತ್ತಿದ್ದಾನೆ. ಸಿದ್ದು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತಿದ್ದಾನೆ. ಬಾದಾಮಿ ಗಾಣಿಗ ಸಮಾಜದ ಉಪಾಧ್ಯಕ್ಷ ಹಣಮಂತಗೌಡ ಖಾನಗೌಡ ಈ ಹರಕೆ ಹೊತ್ತಿದ್ದಾನೆ. 2023ರ ವಿಧಾನಸಭಾ ಚುನಾವಣೆಗೆ ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸುವಂತೆ ಹರಕೆ ಹೊತ್ತಿದ್ದಾನೆ. ಕ್ಷೇತ್ರ ದೂರವಾಗುತ್ತೆ ಎಂಬ ಹೇಳಿಕೆಯನ್ನು ಸಿದ್ದು ಹಿಂಪಡೆಯಲಿ ಎಂದು ಅಭಿಮಾನಿ ಮನವಿ ಮಾಡಿದ್ದಾನೆ. ಸಿದ್ದರಾಮಯ್ಯನವರಿಗೆ ಬಾದಾಮಿ ಕ್ಷೇತ್ರದ ಅಭಿಮಾನಿ ಬಳಗದಿಂದ ಹೆಲಿಕ್ಯಾಪ್ಟರ್ ನೀಡುತ್ತೇವೆ. ಅವರು ಬಾದಾಮಿಯಿಂದಲೇ ಸ್ಪರ್ಧಿಸಬೇಕು ಎಂದು ಅವರು ಹೇಳಿದ್ದಾರೆ.