ಭೂ ನುಂಗಣ್ಣರ ಬಂಧನ

ಶುಕ್ರವಾರ, 23 ಡಿಸೆಂಬರ್ 2022 (18:14 IST)
ಕೋಟಿ ಕೋಟಿ ಮೌಲ್ಯದ ಆಸ್ತಿ ಕಬಳಿಕೆಗೆ ನಕಲಿ ದಾಖಲೆ ಸೃಷ್ಟಿ ಮಾಡಿದವರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. BBMP ಸಿಬ್ಬಂದಿ‌ ಸೇರಿ ಐವರನ್ನು ಬಂಧಿಸಲಾಗಿದೆ. ಬೆಂಗಳೂರಿನ ಪಟ್ಟಣಗೆರೆ ಗ್ರಾಮದ ರಾಮಕೃಷ್ಣಯ್ಯ ಎಂಬುವರ ಜಮೀನು ಕಬಳಿಸಲು ಇವರು ನಕಲಿ ದಾಖಲೆ ಸೃಷ್ಟಿಸಿದ್ರು. ನಕಲಿ ದಾಖಲೆ ಸೃಷ್ಟಿಸಿ ಅತಿಕ್ರಮ ಪ್ರವೇಶ ಮಾಡಿದ್ರು. 40 ಕೋಟಿ ಮೌಲ್ಯದ 3 ಎಕರೆ ಭೂಮಿ ಕಬಳಿಸಲು ನಕಲಿ ದಾಖಲೆ ಸೃಷ್ಟಿ ಮಾಡಲಾಗಿತ್ತು. ಭೂ ದಾಖಲೆ, ಡೆತ್ ಸರ್ಟಿಫಿಕೇಟ್​​ಗಳನ್ನು ನಕಲಿ ಮಾಡಿದ್ರು. RR ನಗರ BBMP ಕಚೇರಿ SDA ನವೀನ್, ಜನಾರ್ಧನ್, ನಾರಾಯಣಸ್ವಾಮಿ ಹಾಗೂ ರಿಯಲ್ ಸಂಸ್ಥೆಯ ಸೋದರರಿಬ್ಬರನ್ನು ಬಂಧಿಸಿದ್ದಾನೆ. ಟ್ರಿಂಕೋ ಇನ್‌ಫ್ರಾ ಪ್ರೈವೇಟ್ ಲಿಮಿಟೆಡ್‌ನ M.S. ಪ್ರಸಾದ್, M.S.ದಿವ್ಯ ಬಂಧಿತರು. ಬಂಧಿತರನ್ನ ಕೋರ್ಟ್​ಗೆ ಹಾಜರು ಪಡಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ