ಸೊಸೆ ಜೊತೆ ಮಲಗಿದ್ದ ವ್ಯಕ್ತಿಯನ್ನು ಥಳಿಸಿ ಬೆತ್ತಲೆ ಮೆರವಣಿಗೆ ಮಾಡಿದ ಮಾವ
ಮದುವೆಯಾಗಿ ಮೂರು ಮಕ್ಕಳಿದ್ದ ವ್ಯಕ್ತಿಯೊಬ್ಬ ಬೇರೊಬ್ಬನ ಜತೆ ಮದುವೆಯಾಗಿದ್ದ ಪ್ರಿಯತಮೆ ಜೊತೆ ಇರೋವಾಗ ಆಕೆಯ ಮಾವನ ಕೈಗೆ ಸಿಕ್ಕಿಬಿದ್ದು ಬೆತ್ತಲೆ ಮೆರವಣಿಗೆ ನಡೆಸಿದ ಘಟನೆ ವರದಿಯಾಗಿದೆ.
ರೊಚ್ಚಿಗೆದ್ದ ಮಾವ ತನ್ನ ಸೊಸೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಥಳಿಸಿ ಗ್ರಾಮದಲ್ಲಿ ಬೆತ್ತಲೆ ಮೆರವಣಿಗೆ ಮಾಡಿಸಿದ್ದಾನೆ.
ಧರ್ಮದೇಟು ನೀಡುತ್ತಿರುವ ಹಾಗೂ ಬೆತ್ತಲೆ ಮೆರವಣಿಗೆ ನಡೆಸಿರೋ ವಿಡಿಯೋ ವೈರಲ್ ಆಗಿದೆ. ವ್ಯಕ್ತಿಯ ವಿರುದ್ಧ ಗೃಹಿಣಿಯ ಕುಟುಂಬದವರು ಅತ್ಯಾಚಾರ ದೂರು ದಾಖಲು ಮಾಡಿದ್ದಾರೆ. ಅಂದ್ಹಾಗೆ ಲಕ್ನೋದಲ್ಲಿ ಘಟನೆ ನಡೆದಿದೆ.