ಮಠದ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರು ಬೇರೆಡೆಗೆ ಶಿಫ್ಟ್
ಶನಿವಾರ, 3 ಸೆಪ್ಟಂಬರ್ 2022 (11:45 IST)
ಚಿತ್ರದುರ್ಗ : ಮುರುಘಾ ಶರಣರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಾದ ಬೆನ್ನಲ್ಲೇ ಮಠದ ಹಾಸ್ಟೆಲ್ ವಿದ್ಯಾರ್ಥಿನಿಯರ ಭವಿಷ್ಯದ ಬಗ್ಗೆ ಚಿಂತೆ ಎದುರಾಗಿದೆ.
ಮುರುಘಾ ಮಠದಲ್ಲಿರುವ ವಿದ್ಯಾರ್ಥಿನಿಯರನ್ನು ಬೇರೆಡೆಗೆ ಶಿಫ್ಟ್ ಮಾಡುವ ಕುರಿತು ಮಕ್ಕಳ ಹಕ್ಕು ಆಯೋಗ ಚಿಂತಿಸಿದೆ.
ಹಾಸ್ಟೆಲ್ನಲ್ಲಿದ್ದ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ತೊಡಕಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ʼಪಬ್ಲಿಕ್ ಟಿವಿʼಗೆ ಆಯೋಗ ತಿಳಿಸಿದೆ.
125 ವಿದ್ಯಾರ್ಥಿನಿಯರು ಹಾಸ್ಟೆಲ್ನಲ್ಲಿ ಇದ್ದರು. ಅವರ ಪೈಕಿ ಸುಮಾರು ಅರ್ಧಕ್ಕರ್ಧ ವಿದ್ಯಾರ್ಥಿನಿಯರು ಹಬ್ಬಕ್ಕೆಂದು ಊರಿಗೆ ಹೋಗಿದ್ದು, ವಾಪಸ್ಸಾಗಿಲ್ಲ. ಹೀಗಾಗಿ ಅವರು ಬಂದ ಬಳಿಕ ಎಲ್ಲಾ ವಿದ್ಯಾರ್ಥಿನಿಯರನ್ನು ಆಯಾಯಾ ಜಿಲ್ಲೆಯ ಮೊರಾರ್ಜಿ ದೇಸಾಯಿ ಹಾಸ್ಟೆಲ್ಗೆ ಶಿಫ್ಟ್ ಮಾಡಲಾಗುವುದು ಎಂದು ಆಯೋಗ ಮಾಹಿತಿ ನೀಡಿದೆ.