ಮುಗಿದಯ ಧ್ವಜ ವಿವಾದ

geetha

ಶನಿವಾರ, 3 ಫೆಬ್ರವರಿ 2024 (14:30 IST)
ಮಂಡ್ಯ -ಕೆರೆಗೋಡು ಗ್ರಾಮದಲ್ಲಿ ಪ್ರತಿಯೊಂದು ಅಂಗಡಿ ಮುಗ್ಗಟ್ಟು, ಮನೆಗಳು ಹಾಗೂ ವಿದ್ಯಾಸಂಸ್ಥೆಗಳ ಮೇಲೆ ಕೇಸರಿ ಧ್ವಜ ಹಾರಿಸುವ ಮೂಲಕ ಹಿಂದೂ ಕಾರ್ಯಕರ್ತರು ಕಾಂಗ್ರೆಸ್‌ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.  ಜ.26 ರಂದು ಹನುಮಧ್ವಜ ಹಾರಿಸಿದ ಪ್ರಕರಣ ಕಾಂಗ್ರೆಸ್‌ ಮತ್ತು ಬಿಜೆಪಿ-ಜೆಡಿಎಸ್‌ ನಡುವೆ ವಿವಾದವನ್ನೆಬ್ಬಿಸಿದೆ. ಈ ನಡುವೆ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರು ಕೆರೆಗೋಡು ಗ್ರಾಮದಲ್ಲಿ ಮನೆಮನೆಗೂ ಹನುಮಧ್ವಜ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಕೆರೆಗೋಡು ಗ್ರಾಮದಲ್ಲಿ ಇನ್ನೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪೊಲೀಸ್‌ ಪಡೆ ಗ್ರಾಮದಲ್ಲಿಯೇ ಬೀಡುಬಿಟ್ಟಿದೆ. ಕೇಸರಿ ಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಗಳು ಮಂಡ್ಯ ಜಿಲ್ಲಾ ಬಂದ್‌ ಗೆ ಶೀಘ್ರದಲ್ಲಿಯೇ ಕರೆ ನೀಡುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ