ಆಟಿಕೆ ಪಿಸ್ತೂಲ್ ತೋರಿಸಿ ದರೋಡೆ ಮಾಡಿದ್ದ ಗ್ಯಾಂಗ್ ಅಂದರ್

ಗುರುವಾರ, 25 ಜುಲೈ 2019 (14:07 IST)
ಆಟಿಕೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿ ದರೋಡೆ ಮಾಡಿ ಪರಾರಿಯಾಗಿದ್ದ ಕಳ್ಳರ ಗ್ಯಾಂಗ್ ನ್ನು ಬಂಧನ ಮಾಡಲಾಗಿದೆ.

ಹೈದರಾಬಾದ್ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸೋ ಮೂಲಕ ಹೆದ್ದಾರಿಯಲ್ಲಿ ದರೋಡೆ ಮಾಡಿದ್ದ ಕಳ್ಳರ ಗ್ಯಾಂಗ್ ನ್ನ ಬಂಧನ ಮಾಡಿದ್ದಾರೆ.

ಬಂಧಿತ ಕಳ್ಳರಿಂದ 2.89 ಕೋಟಿ ರೂಪಾಯಿ ಹಾಗೂ ಚಿನ್ನಾಭರಣಗಳನ್ನು ವಶಕ್ಕೆ ಪೊಲೀಸರು ಪಡೆದುಕೊಂಡಿದ್ದಾರೆ.

ಕಳ್ಳರ ಗ್ಯಾಂಗಿನ ಏಳು ಆರೋಪಿಗಳು ಅಂದರ್ ಆಗಿದ್ದು, ಇವರು ಹೆದ್ದಾರಿಗಳಲ್ಲಿ ಕಳ್ಳತನ, ದರೋಡೆ ಮಾಡುತ್ತಿದ್ದರು ಅಂತ ಪೊಲೀಸರು ತಿಳಿಸಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ