ಗೆಳೆಯರೊಂದಿಗೆ ಪತ್ನಿ ಮಲಗಿಸಿ ವೀಡಿಯೋ ಚಿತ್ರೀಕರಣ ಮಾಡಿದ ಪತಿ!

ಭಾನುವಾರ, 11 ಡಿಸೆಂಬರ್ 2022 (12:17 IST)
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಸೈಕೋಪಾತ್ ಮಾದಕವ್ಯಸನಿ ಪತಿಮಹಾಶಯನೊಬ್ಬ ತನ್ನ ಪತ್ನಿಯನ್ನ ಗೆಳೆಯರೊಂದಿಗೆ ಮಲಗಿಸಿ ವೀಡಿಯೋ ಚಿತ್ರೀಕರಿಸಿ ವಿಕೃತಿ ಮೆರೆದ ಪ್ರಸಂಗವೊಂದು ಬೆಳಕಿಗೆ ಬಂದಿದೆ.

ಸೈಕೋವನ್ನು ಸಂಪಿಗೆಹಳ್ಳಿ ನಿವಾಸಿ ಜಾನ್ ಪಾಲ್ ಎಂದು ಗುರುತಿಸಲಾಗಿದೆ. ಈತನನ್ನು ಮಹಿಳಾ ಟೆಕ್ಕಿ ಯೊಬ್ಬರು 2011ರ ಏಪ್ರಿಲ್ನಲ್ಲಿ ವಿವಾಹವಾಗಿದ್ದಾರೆ.

2015 ರಿಂದ ತನ್ನ ವಿಕೃತಿ ಶುರು ಮಾಡಿದ್ದ ಆರೋಪಿ ಪತಿ ಜಾನ್ಪಾಲ್, ಮನೆಗೆ ತನ್ನ ಗೆಳೆಯರನ್ನ ಕರೆದು ಪಾರ್ಟಿ ಮಾಡಿ ನಂತರ ಗೆಳೆಯರೊಂದಿಗೆ ಬೆಡ್ ಶೇರ್ ಮಾಡು ಎಂದು ಒತ್ತಾಯಿಸುತ್ತಿದ್ದ. ಪತಿಯ ಹಲ್ಲೆಯಿಂದ ತಾಳಲಾರದೇ ಆತನ ಗೆಳೆಯರೊಂದಿಗೆ ಮಹಿಳಾ ಟೆಕ್ಕಿ ದೈಹಿಕ ಸಂಪರ್ಕಕ್ಕೆ ಒಪ್ಪಿಗೆ ಸೂಚಿಸುತ್ತಿದ್ದರು. 

ತನ್ನ ಸ್ನೇಹಿತರಾದ ಸಜೀಶ್ ಹಾಗೂ ನಾಜಿ ಎಂಬವರ ಜೊತೆ ತನ್ನ ಪತ್ನಿಯನ್ನ ಮಲಗಿಸುತ್ತಿದ್ದನು. ಅಲ್ಲದೆ ಮಲಗಿದ ಫೋಟೋ ಹಾಗೂ ವೀಡಿಯೋಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸುವ ಮೂಲಕ ವಿಕೃತಿ ಮೆರೆಯುತ್ತಿದ್ದನು. ಪತ್ನಿಯ ಮೇಲೆ ವಿಕೃತಿ ಮೆರೆದಿದ್ದಲ್ಲದೇ ಪತ್ನಿಯ ತಂಗಿಯನ್ನು ತನ್ನೊಡನೆ ಮಲಗುವಂತೆ ಕಿರುಕುಳ ನೀಡಿದ್ದಾನೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ