ಅಕ್ರಮ ದಾಖಲೆ ಸೃಷ್ಟಿಸಿ ಕೋಟ್ಯಾಂತರ ಬೆಲೆಯ ಜಮೀನು ಗುಳುಂ

ಭಾನುವಾರ, 16 ಜೂನ್ 2019 (19:05 IST)
ಕೋಟ್ಯಾಂತರ ಬೆಲೆ ಬಾಳುವ ಜಮೀನು ಗುಳುಂ ಮಾಡಿರುವ ಪ್ರಕರಣ ನಡೆದಿದೆ. ಅಕ್ರಮ ದಾಖಲೆಗಳ ಸೃಷ್ಟಿಸಿ ಜಮೀನು ಲಪಟಾಯಿಸಿರುವ ಆರೋಪ ಕೇಳಿಬಂದಿದೆ.

ಜಮೀನು ಕಳೆದುಕೊಂಡ ರೈತರು ಪರದಾಟ  ನಡೆಸ್ತಿದ್ದಾರೆ. ಆಂಜಿನಪ್ಪ ಎಂಬುವರಿಂದ ಭೂ ಕಬಳಿಕೆಯಾಗಿರುವ ಆರೋಪ ಕೇಳಿಬಂದಿದೆ.

ಸರ್ವೇ ನಂ. 42 ರಲ್ಲಿ ಭಾರಿ ಗೋಲ್ ಮಾಲ್ ನಡೆದಿದೆ ಎನ್ನಲಾಗಿದೆ. ಶಿಡ್ಲಘಟ್ಟ ತಾಲ್ಲೂಕಿನ ಕಾಳನಾಯಕನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ವಿಜಯಪುರ- ಕೋಲಾರ ಮುಖ್ಯರಸ್ತೆಯಲ್ಲಿರುವ ಜಮೀನು ಒಂಭತ್ತು ಜನರಿಗೆ ಸೇರಬೇಕಾದ ಜಮೀನು ಕಂಡೋರ ಪಾಲು ಆಗಿದೆ.
ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೂ ಅಧಿಕಾರಿಗಳಿಂದ ರೈತರಿಗೆ ನೋಟೀಸ್ ನೀಡಲಾಗಿದೆ. ಖರಾಬು ಜಮೀನು ಪರಭಾರೆ ಮಾಡಬಾರದೆಂಬ  ಸರ್ಕಾರದ ಆದೇಶ ಉಲ್ಲಂಘನೆ ಮಾಡಲಾಗಿದೆ.

ಕಂದಾಯ ಇಲಾಖಾ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ನ್ಯಾಯ ಕೇಳಲು ಹೋದರೆ ರೈತರಿಗೆ ಬೆದರಿಕೆ ಕರೆ ಮಾಡಲಾಗುತ್ತಿದೆ ಎಂದು ರೈತ ನಾಗರಾಜು ದೂರಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಕಾಳನಾಯಕನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ