ಡಿಸಿಪಿ ವಿರುದ್ಧ ದಯಾಮರಣ ಕೋರಿ ರಾಷ್ಟ್ರಪತಿಗೆ ಬರೆದ ಪತ್ರ ಎಲ್ಲಡೆ ವೈರಲ್

ಶನಿವಾರ, 17 ಡಿಸೆಂಬರ್ 2022 (20:29 IST)
ನಗರ ಪೊಲೀಸ್ ವಿಭಾಗದಲ್ಲಿ  ಡಿಸಿಪಿಯೊಬ್ಬರ ಮೇಲೆ ಎರಡನೇ ಬಾರಿ ಕೆಳಹಂತದ ಅಧಿಕಾರಿ, ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ವಿಧಾನಸೌಧ ಭದ್ರತಾ ವಿಭಾಗದ ಸಿಬ್ಬಂದಿಗೇ ಭದ್ರತೆ ಇಲ್ಲದಂತಾಗಿದ್ದು, ದಯಾ ಮರಣ ಕೋರಿ ಡಿಸಿಪಿ ವಿರುದ್ಧ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ವಿಧಾನಸೌಧ ಭದ್ರತಾ ವಿಭಾಗ ಡಿಸಿಪಿ ಅಶೋಕ ರಾಮಪ್ಪ ಜುಂಜರವಾಡ ಅವರ ವಿರುದ್ಧ ಅಧಿಕಾರಿ, ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕೂಡ ಇದೇ ಡಿಸಿಪಿ ವಿರುದ್ಧ ಜೂನ್‌ನಲ್ಲಿ ಕಾರು ಚಾಲಕನೇ ಅಸಮಾಧಾನ ವ್ಯಕ್ತಪಡಿಸಿ ಬಹಿರಂಗ ಪತ್ರ ಬರೆದಿದ್ದರು. ಇದೀಗ ಮತ್ತೆ ಅಧಿಕಾರಿ ಸಿಬ್ಬಂದಿ ಹೆಸ್ರಲ್ಲಿ ಯಾವೂದೇ ಸಹಿ ಇಲ್ಲದೆ ದಯಾ ಮರಣ ಕೋರಿ ರಾಷ್ಟ್ರಪತಿಗೆ ಬರೆದಿರುವ ಅರ್ಜಿ ಎಲ್ಲೆಡೆ ವೈರಲ್ ಆಗಿದೆ.  ಸಶಸ್ತ್ರ ಮೀಸಲು ಪಡೆ ವಿಭಾಗದಿಂದ ಬಂದಿರುವ ಅಶೋಕ ರಾಮಪ್ಪ, 3 ವರ್ಷದಿಂದ ಒಂದೇ ಕಡೆ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ಸಿವಿಲ್ ಪೊಲೀಸರ ಮೇಲೆ ಪ್ರತಿ ಹಂತದಲ್ಲಿ ಕಿರಿಕಿರಿ ಉಂಟು ಮಾಡಿ ಸಣ್ಣ ವಿಚಾರಕ್ಕೂ ರೂಲ್ ನಂ.7 ನಂತ ನೋಟೀಸ್  ಕೊಟ್ಟು ಅನಗತ್ಯವಾಗಿ ತೊಂದರೆ ಕೊಡುತ್ತಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ರೂಲ್ ನಂ.7 ಕೊಟ್ಟಿರುವ ಡಿಸಿಪಿ ಎಂಬ ಕುಖ್ಯಾತಿ ಇವರ ಮೇಲಿದೆ ಎಂದು ಪತ್ರದಲ್ಲಿ ವಿಧಾನಸೌಧ ಭದ್ರತಾ ವಿಭಾಗದ ಪೊಲೀಸರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ವಾರದ ರಜೆ ಕೊಡಲು ನಿರಾಕರಿಸುತ್ತಾರೆ. ಕೆಲ ತಿಂಗಳ ಹಿಂದೆ ಪೊಲೀಸ್ ಒಬ್ಬರ ಪತ್ನಿಗೆ ಹೆರಿಗೆ ಸಮಯದಲ್ಲಿ ಮಗು ಅಸುನೀಗಿದ್ರು ರಜೆ ಕೊಡದೆ ಡ್ಯೂಟಿಗೆ ಬರುವಂತೆ ತಾಖೀತು ಮಾಡಿದ್ರು. ಅಷ್ಟೇ ಅಲ್ಲೆದೆ ಇತ್ತಿಚೇಗೆ ನಿಧನರಾದ ಇನ್ಸ್ಪೆಕ್ಟರ್ ಧನಂಜಯ ಸಾವಿಗೂ ಇದೇ ಡಿಸಿಪಿ ಪರೋಕ್ಷ ಕಾರಣ, ಧನಂಜಯ್ ಗೆ ಚಿಕಿತ್ಸೆ ಪಡೆಯಲು ಸೂಕ್ತ ಸಮಯದಲ್ಲಿ ಸ್ಪಂದಿಸದೆ ಮಾನಸಿಕ ಹಿಂಸೆಗೆ ಒಳಗಾಗುವಂತೆ ಮಾಡಿದ್ರು ಎಂದು ಗಂಭೀರ ಆರೋಪ ಹೊರಿಸಿದ್ದಾರೆ.ಇನ್ನೂ ಭಾರತೀಯ ಸೇವೆಯಿಂದ ನಿವೃತ್ತಿಯಾಗಿ ಪೊಲೀಸ್ ಸೇವೆಗೆ ಸೇರಿರುವ ಮಾಜಿ ಸೈನಿಕನಿಗೆ ಗೌರವ ಕೊಡದೆ ಕೇವಲ ತಮ್ಮ ಮನೆಯ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ವಿಧಾನಸೌಧದ ಮೇಲೆ ಕೇರಳ ಮೂಲದ ಯುವಕರು ದ್ರೋಣ್ ಕ್ಯಾಮರಾ ಹಾರಾಟ ಮಾಡಿದಾಗ ಕೇಸ್ ಮುಚ್ಚಿ ಹಾಕಿದರು. ಎಲ್ಲಿ ಠಾಣೆಗೆ ದೂರು ಕೊಟ್ಟರೇ ತನ್ನ ಕೆಲಸಕ್ಕೆ ಕುತ್ತು ಬರುತ್ತದೆ ಎಂದು ಮುಚ್ಚಿದ್ದಾರೆ. ವಿಷಯ ಬಹಿರಂಗ ಮಾಡದಂತೆ ಸಿಬ್ಬಂದಿಗೆ ಎಚ್ಚರಿಕೆ ಕೊಟ್ಟಿದ್ದಾರೆ ಎಂದು 4 ಪುಟಗಳಲ್ಲಿ ಆರೋಪಗಳನ್ನು ಮಾಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ