ಜೆಡಿಎಸ್ ಅಭ್ಯರ್ಥಿಗೆ ಕೈಕೊಟ್ಟ ಅದೃಷ್ಟ; ಪಕ್ಷೇತರ ಅಭ್ಯರ್ಥಿಗೆ ಲಾಟರಿ ತಂದ ಗೆಲುವು!
ಜೆಡಿಎಸ್ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿ ಇಬ್ಬರೂ ಸಮ ಮತಗಳನ್ನು ಪಡೆದರು. ಲಾಟರಿ ಮೂಲಕ ಆಯ್ಕೆ ಮಾಡಿದಾಗ ಜೆಡಿಎಸ್ ಅಭ್ಯರ್ಥಿಗೆ ಅದೃಷ್ಟ ಕೈಕೊಟ್ಟಿತು. ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಮದ್ದೂರು ಪುರಸಭೆ ಸದಸ್ಯರಾಗಿ ಪಕ್ಷೇತರ ಅಭ್ಯರ್ಥಿ ರತ್ನಾ ಲಾಟರಿ ಮೂಲಕ ಆಯ್ಕೆಯಾದರು.
ಮಂಡ್ಯ ಜಿಲ್ಲೆಯ ಮದ್ದೂರು ಪುರಸಭೆಯ ಚುನಾವಣೆ ಮತ ಎಣಿಕೆ ಮದ್ದೂರು ವೀರಣ್ಣಗೌಡ ಕಾಲೇಜಿನಲ್ಲಿ ನಡೆಯಿತು. 20 ನೇ ವಾರ್ಡ್ ನ ಜೆಡಿಎಸ್ ಅಭ್ಯರ್ಥಿ ಲತಾ ವೆಂಕಟೇಶ್ ಹಾಗೂ ಪಕ್ಷೇತರ ಅಭ್ಯರ್ಥಿ ರತ್ನ ತಲಾ 286 ಮತಗಳನ್ನ ಪಡೆದರು.
ಹೀಗಾಗಿ ಸಮ ಮತ ಪಡೆಯುವ ಮೂಲಕ ಫಲಿತಾಂಶ ಡ್ರಾ ಆಗಿತ್ತು. ಈ ವೇಳೆ ಚುನಾವಣಾ ಸಿಬ್ಬಂದಿ ಇಬ್ಬರ ಹೆಸರನ್ನ ಒಂದು ಡಬ್ಬದಲ್ಲಿ ಹಾಕಿ ಮೇಲೆ ಕಳಗೆ ಕುಲುಕಿದ್ರು. ಬಳಿಕ ಸಿಡಿಪಿಒ ಚೇತನ್ ಕುಮಾರ್ ಅವ್ರ ಕಣ್ಣಿಗೆ ಪಟ್ಟೆ ಕಟ್ಟಿ ಚೀಟಿ ಎತ್ತಿಸಲಾಯಿತು. ಆ ಚೀಟಿಯಲ್ಲಿ ಪಕ್ಷೇತರ ಅಭ್ಯರ್ಥಿ ರತ್ನಾ ಹೆಸರು ಬಂದ ಹಿನ್ನೆಲೆಯಲ್ಲಿ ರತ್ನಾ ಅವ್ರನ್ನ ವಿಜೇತರು ಎಂದು ಘೋಷಿಸಲಾಯಿತು.