ಹೊಸದುರ್ಗದಲ್ಲಿ ಕರಡಿಗಳ ಹಾವಳಿ

ಬುಧವಾರ, 28 ಜೂನ್ 2023 (17:58 IST)
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿದ್ದು, ಹೊಸದುರ್ಗ ನಗರದ ಗೌಸಿಯಾ ನಗರದ ಬಡಾವಣೆಯಲ್ಲಿ ಮಧ್ಯಾಹ್ನದ ಸುಮಾರಿಗೆ ಮೂರು ಕರಡಿಗಳು ಪ್ರತ್ಯಕ್ಷವಾಗಿವೆ.ಕಳೆದ 6 ತಿಂಗಳಿಂದ ಪಟ್ಟಣದ ಹುಳಿಯಾರ್ ವೃತ್ತ, ಗೌಸಿಯಾ ನಗರ, ಭೈರಪ್ಪನ ಬೆಟ್ಟ, ಕೋಟೆ ಬಡಾವಣೆ, ಚನ್ನಸಮುದ್ರದ ಬೆಟ್ಟ ಸೇರಿದಂತೆ ತಾಲ್ಲೂಕಿನ ಹಲವು ಕಡೆಗಳಲ್ಲಿ ಕರಡಿಗಳು ಕಾಣಿಸಿಕೊಳ್ಳುತ್ತಿವೆ. ಕರಡಿಗಳ ಓಡಾಟದಿಂದ ಜನರು ಭಯಭೀತರಾಗಿದ್ದಾರೆ. ಜಮೀನುಗಳಿಗೆ ಹೋಗುವವರು ಹೆದರುವಂತಾಗಿದೆ. ವಾಯು ವಿಹಾರಕ್ಕೆ, ಶಾಲಾ ಕಾಲೇಜುಗಳಿಗೆ ಹೋಗುವವರೂ ಆತಂಕಕ್ಕೀಡಾಗಿದ್ದಾರೆ. ಕರಡಿಗಳ ಹಾವಳಿಗೆ ಅತಂಕದಲ್ಲಿ ದಿನ ದೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗುಡ್ಡದ ಮೇಲೆ ಬೋನ್ ತೆಗೆದುಕೊಂಡು ಹೋಗಿ ಇರಿಸುವುದು ಕಷ್ಟಸಾಧ್ಯ. ಹಾಗಾಗಿ ಕರಡಿಗಳು ಪದೇ ಪದೇ ಕಾಣಿಸಿಕೊಳ್ಳುತ್ತಿವೆ. ಮತ್ತೆ ಕಾಣಿಸಕೊಂಡರೆ, ಮತ್ತು ಬರಿಸುವ ಇಂಜೆಕ್ಷನ್ ನೀಡಿ, ಬೇರೆ ಕಡೆ ಸ್ಥಳಾಂತರಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಸುಜಾತ.ಕೆ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ