ವಾಟ್ಸಾಪ್ ಗ್ರೂಪ್ ರಚಿಸಿದ ಶಾಸಕನಿಗೆ ಹಿಗ್ಗಾಮುಗ್ಗಾ ತರಾಟೆ

ಸೋಮವಾರ, 8 ಜನವರಿ 2018 (14:08 IST)

ಮೈಸೂರಿನ ಕೆ.ಆರ್.ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ಕೆ.ಸೋಮಶೇಖರ್ ಅವರು ವಾಟ್ಸಾಪ್ ಗ್ರೂಪ್ ರಚನೆ ಮಾಡಿ, ಪೇಚಿಗೆ ಸಿಲುಕಿದ್ದು, ಜನರು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಅರಿಯಲು ಪಬ್ಲಿಕ್ 7 ಎಂಬ ವಾಟ್ಸಾಪ್ ಗ್ರೂಪ್ ರಚನೆ ಮಾಡಿದ್ದಾರೆ. ಆದರೆ ಕ್ಷೇತ್ರದ ಸಾರ್ವಜನಿಕರು ಶಾಸಕರ ವಿರುದ್ಧವೇ ಹಲವು ಕಾಮೆಂಟ್ಸ್ಗಳನ್ನು ಹಾಕಿದ್ದಾರೆ. ಶಾಸಕರಾಗಿ ನಾಲ್ಕು ವರ್ಷ ಕಳೆದಿದೆ. ಈಗ ನಿಮಗೆ ನಮ್ಮ ನೆನಪಾಯಿತೇ ಎಂದಿದ್ದಾರೆ.

ಲೋನ್ ಕೇಳಿದಾಗ ಪರಿಚಯ ಇಲ್ಲ ಎಂದವರು, ಈಗೇಕೆ ನಮ್ಮನ್ನು ಗ್ರೂಪನಲ್ಲಿ ಏಕೆ ಸೇರಿಸಿಕೊಂಡಿದ್ದೀರಿ. ಚುನಾವಣೆ ಹತ್ತಿರ ಬರುತ್ತಿದ್ದಂತೆ ನಾವು ನೆನಪಾಗಿದ್ದೇವೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ