ಭರತ್‌ಪುರ್ ಜಿಲ್ಲೆಯಲ್ಲಿ ಆಯೋಜಿಸಲಾದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಗನೇರ್ ಜಿಲ್ಲೆಯ ಶಾಸಕ ತಿವಾರಿ, ಸರಕಾರದ ವಿರುದ್ಧ ನಿರಂತರವಾಗಿ ಪ್ರತಿಭಟಿಸುತ್ತಿದ್ದೇನೆ. ಒಂದು ವೇಳೆ ಪಕ್ಷದ ಹೈಕಮಾಂಡ್‌ಗೆ ತಾಕತ್ತಿದ್ರೆ ಪಕ್ಷದಿಂದ ಹೊರಹಾಕಲಿ ಎಂದು ಅಬ್ಬರಿಸಿದ್ದಾರೆ.
ರಾಜ್ಯದ ಅಳ್ವಾರ್, ಅಜ್ಮೇರ್ ಜಿಲ್ಲೆಗಳಲ್ಲಿ ಉಪಲೋಕಸಭಾ ಚುನಾವಣೆ ನಡೆಯುತ್ತಿದ್ದು ಮತ್ತು ಮಂಡಲ್‌ಘರ್‌ನಲ್ಲಿ ವಿಧಾನಸಭೆಗೆ ಇದೇ ತಿಂಗಳು ಉಪಚುನಾವಣೆ ನಡೆಯಲಿದೆ. ಕಳೆದ ನಾಲ್ಕು ವರ್ಷಗಳ ಸಾಧನೆಯನ್ನು ಜನತೆ ಪ್ರಶ್ನಿಸುತ್ತಿದ್ದಾರೆ. ಸಿಎಂ ರಾಜೇ ಕಪ್ಪು ಕಾಯ್ದೆಯನ್ನು ಯಾಕೆ ಜಾರಿಗೆ ತಂದಿದ್ದಾರೆ?ಯುವಕರಿಗೆ ಯಾಕೆ ಉದ್ಯೋಗ ನೀಡಲಿಲ್ಲ. ಮೀಸಲಾತಿಯ ನೆಪದಲ್ಲಿ ಸರಕಾರ ಉದ್ಯೋಗಗಳನ್ನು ಯಾಕೆ ನೆನೆಗುದಿಯಲ್ಲಿಡಲಾಯಿತು? ಎಂದು ಪ್ರಶ್ನಿಸಿದ್ದಾರೆ.
ಜೈಪುರ್‌ನ ಸಂಗಾನೇರ್ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳಿಂದ ಆಯ್ಕೆಯಾಗಿ ಶಾಸಕರಾಗಿರುವ ತಿವಾರಿ, ಜನತೆಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರಕಾರದ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಪಕ್ಷಕ್ಕೆ ಧಮ್ ಇದ್ರೆ ಪಕ್ಷದಿಂದ ಹೊರಹಾಕಲಿ ಎಂದರು.