ಸತ್ತವನ ಮೊಬೈಲ್‌ ಬಿಚ್ಚಿಟ್ಟ ಕೊಲೆಯ ರಹಸ್ಯ

geetha

ಬುಧವಾರ, 24 ಜನವರಿ 2024 (16:42 IST)
ಬೆಂಗಳೂರು: ಕೊಲೆ ರಹಸ್ಯವನ್ನು ಬೆಂಗಳೂರು ಪೊಲೀಸರು ಕೇವಲ ಒಂದು ಮೊಬೈಲ್‌ನಿಂದ ಬೇಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಹಂತಕರನ್ನು ಸೆರೆಹಿಡಿಯಲಾಗಿದೆ. ಭಾನುವಾರ ರಾಮನಗರ ರೈಲು ನಿಲ್ದಾಣದ ಗೇಟಿನ ಬಳಿ ಶವವೊಂದು ಪತ್ತೆಯಾಗಿತ್ತು.  ವ್ಯಕ್ತಿಯನ್ನು ಕೊಲೆಗೈದ ಬಳಿಕ ಶವದ ಮುಖದ ಮೇಲೆ ಕಾಂಕ್ರೀಟ್‌ ಕಲ್ಲು ಎತ್ತಿ ಹಾಕಿ ವಿರೂಪಗೊಳಿಸಲಾಗಿತ್ತು. ಹೀಗಾಗಿ ಶವದ ಗುರುತು ಪತ್ತೆಯಾಗಿರಲಿಲ್ಲ. 

ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ಪೊಲೀಸರಿಗೆ ಶವದ ಜೇಬಿನಲ್ಲಿದ್ದ ಮೊಬೈಲ್‌ ಪತ್ತೆಯಾಗಿತ್ತು. ಆ ಮೊಬೈಲ್‌ ರಾಮನಗರದ ಟಿಪ್ಪು ನಗರ ನಿವಾಸಿ ಅರ್ಬಾಜ್‌ ಪಾಷಾ ಅವರಿಗೆ ಸೇರಿದ್ದೆಂದು ತಿಳಿದುಬಂದಿತ್ತು.  ಈ ವ್ಯಕ್ತಿಯ ಬೆನ್ನೆತ್ತಿ ಹೋದ ಪೊಲೀಸರಿಗೆ ಸೈಯದ್‌ ಇಲಿಯಸ್‌ ಮತ್ತು ಜಹೀರ್‌ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅರ್ಬಾಜ್‌ ಪಾಷಾ ಅವರನ್ನು ಹತ್ಯೆಗೈದಿರುವುದು ತಿಳಿದುಬಂದಿದೆ. 
ನಗರ ರೈಲ್ವೇ ಪೊಲೀಸರು ಇಬ್ಬರನ್ನೂ ಬಂಧಿಸಿ ಒಳಗಟ್ಟಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ