ಪ್ರತಿಷ್ಠಿತ ಕಂಪನಿಯ ಹೆಸರು ಹೇಳಿ ಲಕ್ಷಾಂತರ ರೂ. ವಂಚಿಸಿದ ಭೂಪ

ಮಂಗಳವಾರ, 24 ಜುಲೈ 2018 (16:02 IST)
ಪ್ರತಿಷ್ಠಿತ ಪತಂಜಲಿ ಕಂಪನಿಯ ಹೆಸರು ಹೇಳಿಕೊಂಡು ಟ್ರೇಡರ್ಸ್ ಮಾಲೀಕನೊಬ್ಬನಿಗೆ ಮೋಸ ಮಾಡಲಾಗಿದೆ. ಅಲ್ಲದೇ ಲಕ್ಷಾಂತರ ರೂ. ಮೌಲ್ಯದ ವಸ್ತು ಪಡೆದು, ನೀಡಿದ ಚೆಕ್ ಬೌನ್ಸ್ ಆಗಿದೆ. ಹೀಗಾಗಿ ಟ್ರೇಡರ್ಸ್ ಮಾಲೀಕ ದೂರು ದಾಖಲಿಸಿದ್ದಾನೆ.

ನಾನೊಬ್ಬ ಅರ್ಚಕ. ದೇವಾಲಯದ ಬಳಿ ಗೋದಾಮು ಕಟ್ಟಬೇಕಿದೆ ಎಂದು ಟ್ರೇಡರ್ಸ್ ಮಾಲಿಕನೊಬ್ಬನಿಗೆ ವ್ಯಕ್ತಿಯೊಬ್ಬ ವಂಚನೆ ಮಾಡಿರುವ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಪ್ರತಿಷ್ಠಿತ ಪತಂಜಲಿ ಕಂಪನಿಯ ಹೆಸರು ಹೇಳಿಕೊಂಡು ಟ್ರೇಡರ್ಸ್ ಮಾಲೀಕನಿಗೆ ಮೋಸ ಮಾಡಿದ್ದಾನೆ. ಕಬ್ಬಿಣದ ಸರಕು ಪಡೆದು 5 ಲಕ್ಷದ ಚೆಕ್ ನೀಡಿ ವಂಚನೆ ಮಾಡಿದ ಭೂಪ ನಾಪತ್ತೆಯಾಗಿದ್ದಾನೆ.
ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್ಪೇಟೆಯಲ್ಲಿ ನಡೆದಿದೆ. ಗೃಹ ನಿರ್ಮಾಣ ಸಾಮಾಗ್ರಿಗಳನ್ನು ಮಾರಾಟಮಾಡುವ ಮಾರುತಿ ಟ್ರೇಡರ್ಸ್ ಮಾಲೀಕ ಬೆಟ್ಟೆಸ್ವಾಮಿಗೌಡನಿಗೆ ವಂಚಿಸಲಾಗಿದೆ.

ಇನ್ನೂ ಆತ ತಮ್ಮ ಪತಂಜಲಿ ಸಾಮಾಗ್ರಿಗಳ ಗೊಡೋನ್ ಮಳಿಗೆಯನ್ನು ನಿರ್ಮಾಣ ಮಾಡಲು ಮುಂದಾಗಿದ್ದೇವೆ ಎಂದುಡಾಬಸ್ ಪೇಟೆಯ ಮಾರುತಿ ಟ್ರೇಡರ್ಸನಿಂದ ಐದು ಲಕ್ಷದ ಒಂದುಸಾವಿರ ಒಂಬೈನೂರ ಅರವತ್ತು ರೂಪಾಯಿಗಳ ಸಿಮೆಂಟ್, ಕಬ್ಬಿಣ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಖರೀದಿಸಿದ್ದಾನೆ. ಟ್ರೇಡರ್ಸ್ ಮಾಲೀಕ ಬೆಟ್ಟಸ್ವಾಮಿಗೌಡನಿಗೆ ನೀಡಬೇಕಿದ್ದ ಹಣದ ರೂಪವನ್ನು ಚೆಕ್ ಮುಖಾಂತರ ನೀಡಿದ್ದಾನೆ. ಆದರೆ ಚೆಕ್ ಫೇಕ್ ಆಗಿದ್ದು, ಬ್ಯಾಂಕಿನಲ್ಲಿ ಹಣ ಡ್ರಾ ಆಗದೇ ಮಾಲೀಕ ಸಂಕಷ್ಟಕ್ಕೀಡಾಗಿದ್ದಾನೆ. ಇನ್ನೂ ಘಟನೆ ಸಂಬಂಧ ಡಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ