ಮದುವೆಯಾದ ಐದೇ ದಿನಕ್ಕೆ ಮನೆಯವರಿಗೆ ನಿದ್ರೆಮಾತ್ರೆ ಹಾಕಿ ಪರಾರಿಯಾದ ನವವಿವಾಹಿತೆ

ಮಂಗಳವಾರ, 19 ಡಿಸೆಂಬರ್ 2017 (12:33 IST)
ನವ ವಿವಾಹಿತೆಯೊಬ್ಬಳು ಮದುವೆಯಾದ ಐದು ದಿನಕ್ಕೆ ಮನೆಯವರಿಗೆಲ್ಲಾ ಊಟದಲ್ಲಿ ನಿದ್ರೆಮಾತ್ರೆ ಬೆರೆಸಿ ಪರಾರಿಯಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನದ ಸಕಲೇಶಪುರ ತಾಲೂಕಿನ ಕೊಂತನಮನೆ ಗ್ರಾಮದಲ್ಲಿ ಡಿಸೆಂಬರ್ 6 ರಂದು ಹಾನುಬಾಳು ಸಮೀಪದ ಕುಸುಮಾಳನ್ನ ಮೋಹನ್ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಕುಸುಮಾ ಮದುವೆಯಾದ ಒಂದು ವಾರಕ್ಕೆ ಮನೆಯವರಿಗೆಲ್ಲಾ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಪರಾರಿಯಾಗಿದ್ದಾಳೆ.

ಈ ಯುವತಿ ಬೇರೊಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಾಳೆ ಎಂದು ಹೇಳಿಕೊಂಡಿದ್ದಾಳೆ. ಮದುವೆಯಾದ ನಂತರ ಈ ವಿಷಯ ಹೇಳಿದ್ದರಿಂದ ಮನೆಯವರಿಗೆ ಬರಸಿಡಲು ಬಡಿದಂತಾಗಿದೆ.

ಯುವತಿಯ ತಂದೆ ಹಾಗೂ ತಾಯಿ ಮೃತಪಟ್ಟಿದ್ದು, ಸೋದರಮಾವ ನೀಲರಾಜ್ ಈಕೆಯನ್ನು ಬೆಳಸಿ ಪಿಯುಸಿವರೆಗೂ ಓದಿಸಿ ಮದುವೆ ಮಾಡಿದ್ದರು.

ಎರಡು ದಿನಗಳ ಬಳಿಕ ಪೊಲೀಸರಲ್ಲಿಗೆ ಬಂದ ಯುವತಿ ಈ ಮದುವೆ ನನಗೆ ಇಷ್ಟವಿರಲಿಲ್ಲ. ಮನೆಯವರು ಒತ್ತಾಯಪೂರ್ವಕವಾಗಿ ಮದುವೆ ಮಾಡಿಸಿದ್ದಾರೆ ಎಂದು ಪತಿ ಹಾಗೂ ಸೋದರಮಾವನ ವಿರುದ್ಧ ದೂರು ನೀಡಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ