ದುಬೈನಿಂದ ಬಂದ ಗಂಡನಿಂದ ಗರ್ಭಿಣಿ ಪತ್ನಿಗೂ ಬಂತು ಕೊರೊನಾ ವೈರಸ್

ಬುಧವಾರ, 15 ಏಪ್ರಿಲ್ 2020 (17:08 IST)
ಹೊಸದಾಗಿ ಒಂದು ಕೊರೊನಾ ವೈರಸ್ ಕೇಸ್ ಪತ್ತೆಯಾಗುವುದರೊಂದಿಗೆ ಈ ಜಿಲ್ಲೆಯಲ್ಲಿ ವೈರಸ್ ಪೀಡಿತರ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ.

ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಇನ್ನೊಂದು ಕೋವಿಡ್-19 ಸೋಂಕು ಪ್ರಕರಣ ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ದೃಢಪಟ್ಟ ಸೋಂಕಿತರ ಸಂಖ್ಯೆ ಒಟ್ಟು ಹತ್ತಕ್ಕೇರಿದಂತಾಗಿದೆ.

ಈತ ಮಾ.17 ರಂದು ದುಬೈನಿಂದ ಮುಂಬೈಗೆ ವಿಮಾನದ ಮೂಲಕ ಆಗಮಿಸಿ ನಂತರ ರೈಲಿನಲ್ಲಿ ಭಟ್ಕಳಕ್ಕೆ ಆಗಮಿಸಿದ್ದ. ವಿದೇಶದಿಂದ ಆಗಮಿಸಿದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಈತನ ಕೈಮೇಲೆ ಹೋಮ್ ಕ್ವಾರಂಟೈನ್ ಮುದ್ರೆ ಹಾಕಿದ್ದರು. ಮಾ.31 ರಂದು ಈತನ ಗರ್ಭಿಣಿ ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ.

ಈತನ ಕೈಮೇಲಿನ ಹೋಮ್ ಕ್ವಾರಂಟೈನ್ ಮುದ್ರೆಯನ್ನು ಗಮನಿಸಿದ ವೈದ್ಯರು ಇವರಿಬ್ಬರನ್ನು ಭಟ್ಕಳದ ತಾಲೂಕಾ ಆಸ್ಪತ್ರೆಗೆ ದಾಖಲಿಸಿದ್ದರು. ಆ ನಂತರ ಅಲ್ಲಿ ಅವರಿಬ್ಬರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ವೇಳೆ ಈತನ ಪತ್ನಿಗೆ ಸೋಂಕು ತಗಲಿರುವುದು ದೃಢಪಟ್ಟಿತ್ತು. ಆದರೆ ಈತನ ವರದಿಯು ನೆಗೆಟಿವ್ ಬಂದಿತ್ತು.

ಆಗ ಮತ್ತೊಮ್ಮೆ ಈತನ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಈತನಿಗೆ ಸೋಂಕು ಇರೋದು ದೃಢಪಟ್ಟಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ