ಎರಡು ತಿಂಗಳಲ್ಲಿ ಡಬ್ಬಲ್ ಆದ ಬೆಳೆಕಾಳುಗಳ ಬೆಲೆ..!

ಭಾನುವಾರ, 25 ಜೂನ್ 2023 (18:31 IST)
ಬೆಲೆ ಏರಿಕೆ ಬಿಸಿಯಿಂದ ಸಾಮಾನ್ಯ ಜನರು ಜೀವನ ಮಾಡೋದೇ ಕಷ್ಟವಾಗಿದೆ.‌ ದಿನಕ್ಕೊಂದು ರೇಟ್ ಹೆಚ್ಚಳದ ಬಿಸಿ, ಜನಸಾಮಾನ್ಯರ ಜೀವನ ಬರ್ಬಾದ್ ಮಾಡಿದೆ. ಈಗಷ್ಟೆ ಕರೆಂಟ್ ರೇಟ್ ಹೆಚ್ಚಳದಿಂದ ಚೇತರಿಸಿಕೊಳ್ತಿರೋ ಜನರಿಗೆ ಈಗ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟಿದೆ. ಜಸ್ಟ್ ಎರಡು ತಿಂಗಳಲ್ಲಿ ಎರಡೆರೆಡು ಸಲ ಬೇಳೆಕಾಳುಗಳ ಬೆಲೆ ಏರಿಕೆ ಆಗಿದೆ. ಪ್ರತಿ ಕೆಜಿ ಬೇಳೆಕಾಳುಗಳ ಬೆಲೆ ಸರಾಸರಿ 10 ರಿಂದ 20 ರೂವರೆಗೆ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳ್ತಿದೆ.

ಮಳೆಯಿಂದ ಬೆಳೆಗಳಿಗೆ ಹಾನಿ ಆಗಿರೋದು ಬೆಲೆ ಹೆಚ್ಚಳಕ್ಕೆ ಒಂದು ಕಾರಣವಾದ್ರೆ, ಬೇರೆ ದೇಶಗಳಿಗೆ ಬೇಳೆ ಕಾಳುಗಳನ್ನು ರಫ್ತು ಮಾಡೋ ಕಾರಣದಿಂದ ಬೆಲೆ ಏರಿಕೆ ಆಗ್ತಿದೆ. ಏಪ್ರಿಲ್ ತಿಂಗಳಿನಲ್ಲಿ 10 ರಿಂದ 20 ರೂ ವರೆಗೆ ಬೆಲೆ ಏರಿಕೆಯಾಗಿತ್ತು. ಮೇ ತಿಂಗಳಲ್ಲಿ ಮತ್ತೆ‌ 20 ರಿಂದ 40 ರೂಪಾಯಿಯವರೆಗೂ ಪ್ರತಿ ಕೆಜಿಗೆ ಬೆಲೆ ಏರಿಕೆಯಾಗಿದೆ. ಹಾಗಾದ್ರೆ ಯಾವೆಲ್ಲಾ ಬೇಳೆಗಳ ಬೆಲೆ ಎಷ್ಟಾಗಿದೆ ಅಂತ ನೋಡುವುದಾದರೆ
 
 
 
ಬೇಳೆ             ಏಪ್ರಿಲ್ ಮೇ  ರಿಟೇಲ್ ಬೆಲೆ
ತೊಗರಿಬೇಳೆ‌‌   120.   140. 160 ರೂ
 
ಉದ್ದಿನಬೇಳೆ   120.   140.  160 ರೂ
 
ಕಡ್ಲೆಬೇಳೆ  ‌‌‌‌      60.      70.     80 ರೂ
 
ಹೆಸರಿಬೇಳೆ‌‌     90.      110.   120 ರೂ
 
ಹೆಸರುಕಾಳು   100.    120.    140 ರೂ
 
ಅವರೆಬೇಳೆ‌‌‌     130.    170.    180 ರೂ
 
ಅವರೆಕಾಳು‌‌‌‌     110.    140.    160 ರೂ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ