ಬೆಂಗಳೂರು : ರೈತರಿಗೆ ಕೊಡುತ್ತಿದ್ದ ಹಾಲಿನ ಪ್ರೋತ್ಸಾಹ ಧನ ಕಡಿತಗೊಳಿಸಿ ವಿರೋಧಕ್ಕೆ ಕಾರಣವಾಗಿದ್ದ ಹಾಲು ಒಕ್ಕೂಟ ಸಿಎಂ ಸೂಚನೆ ಮೇರೆಗೆ ಇದೀಗ ಹಾಲಿನ ಪ್ರೋತ್ಸಾಹ ಧನ ನೀಡೋದಕ್ಕೆ ಮುಂದಾಗಿದೆ.
ಈಗ ಹಾಲು ಒಕ್ಕೂಟ ಸರ್ಕಾರಕ್ಕೊಂದು ಕಂಡಿಷನ್ ಕೂಡ ಹಾಕಿದೆ. ಗ್ರಾಹಕರಿಗೆ ಬಿಗ್ ಶಾಕ್ ಕೊಡುವ ರೀತಿಯಲ್ಲಿ ಕಾಣಿಸ್ತಾ ಇದೆ. ಬೆಲೆಯೇರಿಕೆ ಬಿಸಿ ಜನರನ್ನು ನಿರಂತರವಾಗಿ ಸುಡುತ್ತಿದೆ. ಇದರ ಮಧ್ಯೆ ಈಗ ಹಾಲಿನ ದರ ಏರಿಕೆಯ ಭೀತಿ ಜನರಿಗೆ ಕಾಡುತ್ತಿದೆ.
ಯಾಕೆಂದ್ರೆ ಹಾಲು ಒಕ್ಕೂಟಗಳು ನಷ್ಟದ ಕಾರಣಕ್ಕೆ ಎರಡು ತಿಂಗಳಿಂದ ರೈತರಿಗೆ ನೀಡುತ್ತಿದ್ದ ಸಹಾಯಧನವನ್ನು ನಿಲ್ಲಿಸೋಕೆ ತಯಾರಾಗಿದ್ದವು. ಇದಕ್ಕೆ ದೊಡ್ಡ ವಿರೋಧ ವ್ಯಕ್ತವಾಗುತ್ತಿದ್ದಂತೆ ಸಿಎಂ ಸೂಚನೆಯ ಮೇರೆಗೆ ಕಡಿತಗೊಳಿಸಿದ ದರವನ್ನು ಮತ್ತೆ ನೀಡಲು ಒಕ್ಕೂಟಗಳು ಮುಂದಾಗಿದೆ.
ಸರ್ಕಾರದ ಮುಂದೆ ಈಗ ದರ ಏರಿಕೆಯ ಪ್ರಸ್ತಾವನೆ ಇಡಲು ತಯಾರಾಗಿದೆ. ನಿತ್ಯವೂ 16 ಲಕ್ಷ ನಷ್ಟದಲ್ಲಿ ನಡೆಯುತ್ತಿದೆ. ಇದು ಕೆಎಂಎಫ್ ನ ಹಾದಿಗೆ ಕಷ್ಟವಾಗಲಿದೆ. ಪ್ರತಿ ಲೀಟರ್ ಗೆ 5 ರೂಪಾಯಿ ಹೆಚ್ಚಳಕ್ಕೆ ಮನವಿ ಮಾಡಲು ನಿರ್ಧಾರ ಮಾಡಲು ನಿರ್ಧರಿಸಿದೆ.