ಕಬ್ಬು ಬೆಳೆಗಾರರ ಸಮಸ್ಯೆ: ಸಚಿವ ಕಾಶೆಂಪೂರ ಹೇಳಿದ್ದೇನು ಗೊತ್ತಾ?

ಭಾನುವಾರ, 18 ನವೆಂಬರ್ 2018 (21:12 IST)
ಕಬ್ಬಿನ ಬೆಳೆಗೆ ಸೂಕ್ತ ದರ ನಿಗದಿ ಕುರಿತಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ರೈತರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಕೊಳ್ಳಲಿದ್ದಾರೆಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ ಹೇಳಿದ್ದಾರೆ.

ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಶೀಘ್ರದಲ್ಲೇ ರೈತರೊಂದಿಗೆ ಚರ್ಚೆ ನಡೆಸುವರೆಂದು ತಿಳಿಸಿದರು.

ಈಗಾಗಲೇ ಕಬ್ಬು ಬೆಳೆಗಾರರಿಗೆ ಬರಬೇಕಾದ ಬಾಕಿ ಒದಗಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ರಾಜ್ಯದಲ್ಲಿ ಯಾವೊಬ್ಬ ಶಾಸಕರೂ ಬಿಜೆಪಿಗೆ ತೆರಳುವ ಪ್ರಮೇಯವೇ ಇಲ್ಲ. ಕರ್ನಾಟಕದಲ್ಲಿ ಆಪರೇಷನ್ ಕಮಲ ನಡೆಯುವುದಿಲ್ಲ ಎಂದ ಅವರು, ಉಪ ಚುನಾವಣೆ ನಂತರ ಅದೆಲ್ಲ ಬದಲಾಗಿದೆ ಎಂದು ಹೇಳಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ