ರಾಮಾಯಣ ಈಗಲೂ ಬರ್ತಿವೆ ಎಂದ ಜಾರಕಿಹೊಳಿ

ಸೋಮವಾರ, 14 ಅಕ್ಟೋಬರ್ 2019 (15:15 IST)
ರಾಮಾಯಣಗಳು ಈಗಲೂ ಬಹಳಷ್ಟು ಬರ್ತಾನೆ ಇವೆ ಅಂದಿದ್ದಾರೆ ಜಾರಕಿಹೊಳಿ.
 
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ರಾಮಾಯಣಗಳು ಬರುತ್ತಿವೆ. ಇದರಿಂದ ಗೊಂದಲ ಮೂಡುತ್ತಿರುವುದರಿಂದ ಮೂಲ ವಾಲ್ಮೀಕಿ ರಾಮಾಯಣ ಹಾಗೂ ನಂತರ ಬಂದ ರಾಮಾಯಣಗಳ ಬಗ್ಗೆ ಚಿಂತನೆ ನಡೆಸಬೇಕು. ಹೀಗಂತ ಶಾಸಕ ಸತೀಶ್ ಜಾರಕಿಹೊಳಿ ಪ್ರತಿಪಾದಿಸಿದ್ರು. 

ದಯೆ, ಮಾನವೀಯತೆ ಇಲ್ಲದ ಧರ್ಮ ನಮ್ಮದಾಗುವುದು ಸಾಧ್ಯವಿಲ್ಲ, ಮಾನವಿಯತೆಯೇ ನಮ್ಮ ಧರ್ಮವಾಗಬೇಕು.  
ದೇವರಲ್ಲೂ ತಾರತಮ್ಯ ಮಾಡಲಾಗುತ್ತಿದೆ. ಕೆಲವು ಉಗ್ರ ದೇವರು, ಇನ್ನುಳಿದವು ಶಾಂತ ದೇವರಿದ್ದು, ಶಾಂತ ದೇವರು ಬೆಳ್ಳಿ-ಬಂಗಾರ ಮಾತ್ರ ಬೇಡುತ್ತವೆ ಎಂದು ಮಾರ್ಮಿಕವಾಗಿ ಕುಟುಕಿದ್ರು.

ಆಹಾರ ಪದ್ಧತಿ, ವ್ಯಕ್ತಿಯ ಬಣ್ಣ-ರೂಪಗಳ ಮೇಲೆ ತಾರತಮ್ಯ ನಡೆಯುತ್ತಿದ್ದು, ಈ ಬಗ್ಗೆ ಸಮಾಜದ ಜನರು ಜಾಗೃತರಾಗಬೇಕಿದೆ ಅಂತಂದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ