ಸಿಲಿಕಾನ್ ಸಿಟಿಯಲ್ಲಿ ಹಾವುಗಳ ಕಾಟಕ್ಕೆ ಬೆಚ್ಚಿಬಿದ್ದ ಜನರು
ನಾಗರಬಾವಿ ಬಡಾವಣೆಯಲ್ಲಿ ನಾಗರಹಾವಿನ ಹಾವಳಿ ಹೆಚ್ಚಾಗಿದೆ.ತಗ್ಗು ಪ್ರದೇಶ.ಮತ್ತುಖಾಲಿಜಾಗದಲ್ಲಿ ಆರಡಿ ಕುರುಚಲ ಗಿಡಗಳುಬೆಳೆದಿರುವುದರಿಂದ ಆ ಜಾಗದಲ್ಲಿ ವಿಷಜಂತುಗಳ ಕಾಟ ವಿಪರೀತವಾಗಿದೆ.ನಾಗರಬಾವಿ ಯಬಡಾವಣೆಯಲ್ಲಿರೆವಿನ್ಯೂ ನಿವೇಶನ.ಬಿ.ಡಿ.ಎ ಜಾಗದಲ್ಲಿ ಪೂದೆಗಳು ಬೆಳೆದು ಇಲ್ಲಿ ಹಾವುಗಳು ವಾಸಿಸುವ ತಾಣಗಳಾಗಿದೆ.ಬಿ.ಬಿ.ಎಂ.ಪಿ ಅರಣ್ಯ ಇಲಾಖೆಗೆ ಹತ್ತಾರು ದೂರುಗಳು ಕೊಟ್ಟರೂ ಪ್ರಯೋಜನವಾಗಿಲ್ಲ.ಸ್ನೇಕ್ ಹಿಡಿಯುವವರನ್ನ ಕರೆಸಿಕೊಂಡು ಹಾವುಗಳನ್ನು ಹಿಡಿಸುವ ಕೆಲಸ ಇಲ್ಲಿನ ನಾಗರೀಕರು ಮಾಡುತ್ತಿದ್ದಾರೆ. ಬಿ.ಬಿ.ಎಂ.ಪಿಹಾಗೂ ಬಿ.ಡಿ.ಎ ನಿಯಮಾವಳಿ ಪ್ರಕಾರ ಖಾಲಿನಿವೇಶನದ ಮಾಲೀಕರುಗಳು ಸ್ವಂತ ಖರ್ಚಿನಿಂದ ಸ್ವಚ್ಚಗೊಳಿಸುತ್ತಿರಬೇಕು. ಇಲ್ಲವಾದರೆ ದಂಡ ವಿದಿಸುವ ಅಧಿಕಾರ ಇವರಿಗಿದೆ.ಅಪಾಯವಾಗುವ ಮುನ್ನ ಅದಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.