ಸ್ಪೀಕರ್ 24 ಗಂಟೆ ಇರಬೇಕು - ಡಿ.ಕೆ.ಶಿವಕುಮಾರ್ ದಬ್ಬಾಳಿಕೆಯಿಂದ ಬೆಳೆದವರಂತೆ

ಭಾನುವಾರ, 7 ಜುಲೈ 2019 (16:24 IST)
ಶಾಸಕರಿಗೆ, ಜನರಿಗೆ ಬೇಕಿಲ್ಲದ ಮೈತ್ರಿ ಸರ್ಕಾರ ಯಾಕೆ ಮುಂದುವರಿಯಬೇಕು. ಹೀಗಂತ ಬಿಜೆಪಿ ಹಿರಿಯ ಮುಖಂಡ ಪ್ರಶ್ನೆ ಮಾಡಿದ್ದಾರೆ.

ಚಿತ್ರದುರ್ಗದಲ್ಲಿ ಶಾಸಕ ಶ್ರೀರಾಮುಲು ಹೇಳಿಕೆ ನೀಡಿದ್ದು, ಇನ್ನೂ 3-4 ಪಟ್ಟು ಶಾಸಕರು ರಾಜೀನಾಮೆ ನೀಡ್ತಾರೆ.
ಸದನಕ್ಕೆ ಹಿರಿಯರಾದ ಸ್ವೀಕರ್ 24 ಗಂಟೆ ಇರಬೇಕು. ಸ್ಪೀಕರ್ ಜವಾಬ್ದಾರಿ ಸ್ಥಾನದಲ್ಲಿದ್ದು, ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದರು. ಇದೇ ವೇಳೆ, ಸರ್ಕಾರ ಬ್ಲಾಕ್ ಮೇಲ್ ತಂತ್ರ ಅನುಸರಿಸುತ್ತಿದೆ.

ಸ್ವಯಂ ಪ್ರೇರಣೆಯಿಂದ ಶಾಸಕರು ರಾಜೀನಾಮೆ ನೀಡಿದ್ದಾರೆ. ಸರ್ಕಾರ ಇದೆಲ್ಲವನ್ನ ಪ್ಲಾನ್ಡ್ ಆಗಿ ಮಾಡುತ್ತಿದೆ ಅನ್ನವುದು ಇವತ್ತಿನ ಬೆಳವಣಿಗೆ ನೋಡಿದರೆ ತಿಳಿಯುತ್ತೆ ಎಂದರು.

ಸರ್ಕಾರವನ್ನ ಜನರು ತಿರಸ್ಕಾರಿಸಿದ್ದಾರೆ, ಶಾಸಕರು ತಿರಸ್ಕರಿಸಿದ್ದಾರೆ. ಸಿಎಂ ಬಂದ ಕೂಡಲೇ ರಾಜ್ಯಪಾಲರಿಗೆ ರಾಜೀನಾಮೆ ನೀಡಬೇಕು ಎಂದರು.

ಶಾಸಕರ ರಾಜೀನಾಮೆ ಪತ್ರ ಹರಿದ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಶ್ರೀರಾಮುಲು, ಡಿಕೆ ಶಿವಕುಮಾರ್ ಮೊದಲಿಂದ ಅದೇ ಸಂಸ್ಕೃತಿ ಸಂಪ್ರದಾಯ ಬೆಳೆಸಿಕೊಂಡಿದ್ದಾರೆ. ದಬ್ಬಾಳಿಕೆ ದೌರ್ಜನ್ಯದಿಂದ ಬೆಳೆದವರು ಡಿಕೆಶಿ ಎಂದು ಟೀಕೆ ಮಾಡಿದ್ರು.
ಕೂಡಲೇ ಸರ್ಕಾರ ರಾಜೀನಾಮೆ ನೀಡಿರುವ ಶಾಸಕರಿಗೆ ಭದ್ರತೆ ನೀಡಬೇಕು ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ