ಯುವ ಸಮುದಾಯಕ್ಕೆ ಹೆಚ್ಚಿನ ಜವಾಬ್ದಾರಿಯಿದೆ-ಡಿ.ಕೆ.ಶಿವಕುಮಾರ್

ಶುಕ್ರವಾರ, 15 ಸೆಪ್ಟಂಬರ್ 2023 (19:47 IST)
ವಿಧಾನಸೌಧದಲ್ಲಿ ‘ಸಂವಿಧಾನ ಪೀಠಿಕೆಯ ಓದು’ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, ಒಂದೂವರೆ ಕೋಟಿ ಜನ ಪಾಲ್ಗೊಂಡು ಪ್ರಜಾಪ್ರಭುತ್ವ ದಿನವನ್ನ ಆಚರಿಸುತ್ತಿದ್ದೇವೆ. ಈ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನ ಯಶಸ್ವಿ ಮಾಡಲು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಾನು ಕೆಪಿಸಿಸಿ ಅಧ್ಯಕ್ಷ ಆಗಿ ಈ ಜವಾಬ್ದಾರಿ ತೆಗೆದುಕೊಂಡಾಗ ಸಂವಿಧಾನ ಪೀಠಿಕೆ ಪ್ರಾರಂಭ ಮಾಡುವ ಕೆಲಸ ಮಾಡಿದೆ. ಆದರೆ ಇಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಮಕ್ಕಳ ಪಾತ್ರದ ಬಗ್ಗೆ ಯೋಚನೆ ಮಾಡಬೇಕಿದೆ. ಸುರಕ್ಷಿತ, ಯುವ ಸಮುದಾಯಕ್ಕೆ ಮಹತ್ವದ ಜವಾಬ್ದಾರಿ ಇದೆ. ದೇಶ ಕಟ್ಟುವ ಅವರಿಗೆ ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ತಿಳಿಸಬೇಕಿದೆ. ಇಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಕೊಟ್ಟ ಶ್ರೇಷ್ಠ ದಿನ. ಅವರ ಕೊಡುಗೆಯನ್ನ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ