ಆಸ್ಪತ್ರೆಯಲ್ಲಿ ನವಜಾತ ಶಿಶು ಕಳ್ಳತನ
ಬೆಳಗಾವಿ ಜಿಲ್ಲೆಯ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಗಂಡು ನವಜಾತ ಶಿಶುವೊಂದು ಜನಿಸಿತ್ತು. ನರ್ಸ್ ವೇಷದಲ್ಲಿ ಆಸ್ಪತ್ರೆಗೆ ಎಂಟ್ರಿ ಕೊಟ್ಟ ಅಪರಿಚಿತ ಮಹಿಳೆಯೊಬ್ಬಳು ಮಗುವನ್ನು ತೂಕ ಮಾಡಿಸಬೇಕು ಎಂದು ಹೇಳಿ ತಾಯಿ ಮಡಿಲಿನಿಂದ ಕಳ್ಳತನ ಮಾಡಿ ಪರಾರಿಯಾಗಿದ್ದಾಳೆ.
ಇತ್ತ ಅರ್ಧ ಘಂಟೆ ಕಳೆದರೂ ಮಗು ತಂದು ಕೊಡದ ನರ್ಸ್ ಬಗ್ಗೆ ಅನುಮಾನಗೊಂಡಿದ್ದಾರೆ. ಇದರಿಂದ ಪೋಷಕರು ಗಾಬರಿಗೊಂಡಾಗ ಆಸ್ಪತ್ರೆ ಸಿಬ್ಬಂದಿ ಎಚ್ಚೆತ್ತು ಅಥಣಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅಥಣಿ ಪಿಎಸ್ಐ ಶಿವಶಂಕರ ಮುಖರಿ ಮಗು ಕಳೆದುಕೊಂಡ ಪೋಷಕರಿಂದ ಮಾಹಿತಿ ಪಡೆದಿದ್ದಾರೆ.