ಬಿಜೆಪಿ ಮುಖಂಡರಿಗೆ ಎರಡು ನಾಲಿಗೆ ಇದೆ: ಸಿಎಂ ಸಿದ್ದರಾಮಯ್ಯ

ಶುಕ್ರವಾರ, 10 ನವೆಂಬರ್ 2017 (16:08 IST)
ಬಿಜೆಪಿ ಮುಖಂಡರಿಗೆ ಎರಡು ನಾಲಿಗೆ ಇದೆ. ಆದ್ದರಿಂದಲೇ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅರು ಎರಡು ವರ್ಷಗಳ ಹಿಂದೆ. ಟಿಪ್ಪುಸುಲ್ತಾನ್ ವೇಷಧರಿಸಿ ಶೌರ್ಯ ಶಾರ್ಯ ಸಾಹಸವನ್ನು ಕೊಂಡಾಡಿದ್ದ ಇದೇ ಬಿಜೆಪಿ ನಾಯಕರು ಟಿಪ್ಪುವನ್ನು ದೇಶದ್ರೋಹಿ ಕೊಲೆಗಡುಕ ಎನ್ನುತ್ತಿದ್ದಾರೆ ಎಂದು ಗುಡುಗಿದರು.
 
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಘೋಷಣೆ ಕೂಗುವ ಬಿಜೆಪಿ ನಾಯಕರು ಮುಸ್ಲಿಂ ಸಮದಾಯವನ್ನು ವಿರೋಧಿಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
 
ಬಿಜೆಪಿಯ ನವಕರ್ನಾಟಕ ಪರಿವರ್ತವಾ ಯಾತ್ರೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಿಎಂ, ಪರಿವರ್ತನೆಯಾಗಬೇಕಾಗಿರುವುದು ಬಿಜೆಪಿ ನಾಯಕರಲ್ಲಿ. ಕೋಮುವಾದಿಗಳಿಂದ ಜಾತ್ಯಾತೀತವಾದಿಗಳಾಗಿ ಬದಲಾಗಬೇಕು ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ