ಶೃಂಗೇರಿ ಶಾರದಾಂಬೆಯ ದರ್ಶನಕ್ಕೆ ಬರುವವರಿಗೆ ವಸ್ತ್ರಸಂಹಿತೆ ಜಾರಿ, ಹೀಗಿದ್ದರೆ ಅಷ್ಟೇ ದೇವಸ್ಥಾನಕ್ಕೆ ಪ್ರವೇಶ
ವಸ್ತ್ರಸಂಹಿತೆ ಹೀಗಿದೆ: ಪುರುಷರು ಧೋತಿ, ಶಲ್ಯ, ಉತ್ತರೀಯ (ಅಂಗವಸ್ತ್ರ) ಮಹಿಳೆಯರು ಸೀರೆ, ಸಲ್ವಾರ್, ದುಪಟ್ಟಾ, ಲಂಗಾ ದಾವಣಿ ಧರಿಸಿ ದೇವಾಲಯವನ್ನು ಪ್ರವೇಶಿಸಬಹುದಾಗಿದೆ.
ಈ ಹಿಂದೆ ಶ್ರೀಮಠದ ಗುರು ನಿವಾಸದಲ್ಲಿ ಗುರುಗಳ ದರ್ಶನ ಪಡೆಯುವುದಕ್ಕೆ ವಸ್ತ್ರ ಸಂಹಿತೆ ಜಾರಿಯಲ್ಲಿತ್ತು ಈಗ ಆ.15 ರಿಂದ ದೇವಾಲಯಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೂ ವಸ್ತ್ರ ಸಂಹಿತೆ ಕಡ್ಡಾಯವಾಗಿ ಜಾರಿಯಾಗಲಿದೆ.