ಇನ್ನುಮುಂದೆ ದೇವಸ್ಥಾನದಲ್ಲಿ ಸಿಂಪಲ್ ಆಗಿ ಮದುವೆಯಾಗಲು ಅವಕಾಶವಿಲ್ಲ

ಬುಧವಾರ, 21 ನವೆಂಬರ್ 2018 (08:22 IST)
ಬೆಂಗಳೂರು : ದೇವಸ್ಥಾನದಲ್ಲಿ ಸಿಂಪಲ್ ಆಗಿ ಮದುವೆಯಾಗುವ ನಿರ್ಧಾರ ಮಾಡುವವರಿಗೆ ಇನ್ನುಮುಂದೆ ದೇವಸ್ಥಾನದಲ್ಲಿ ಮದುವೆಯಾಗುವ ಅವಕಾಶವಿಲ್ಲವೆಂದು ಮುಜರಾಯಿ ಇಲಾಖೆ ತಿಳಿಸಿದೆ.


ಎರಡನೇ ಮದುವೆಯಾಗುವವರು ಹಾಗೂ ಪ್ರೇಮ ವಿವಾಹವಾಗುವವರು ಹೆಚ್ಚಾಗಿ ದೇವಸ್ಥಾನದಲ್ಲೇ ಮದುವೆಯಾಗುತ್ತಿದ್ದರು. ಆದರೆ ಈ ಮದುವೆಯಿಂದ ಏನಾದರೂ ತೊಂದರೆಯಾದರೆ ಅದಕ್ಕೆ ದೇವಸ್ಥಾನದ ಅರ್ಚಕರೇ ಸಾಕ್ಷಿಯಾಗಬೇಕಿರುವುದರಿಂದ ಸಾಕಷ್ಟು ಅರ್ಚಕರಿಗೆ ಇದರಿಂದ ತೊಂದರೆಯಾಗುತಿತ್ತು. ಹೀಗಾಗಿ ದೇಗುಲದಲ್ಲಿ ಮದುವೆಯೇನ್ನು ನಿಷೇಧಿಸಬೇಕು ಎಂದು ಅರ್ಚಕರು ಮುಜರಾಯಿ ಇಲಾಖೆಗೆ ಮನವಿ ಮಾಡಿದ್ದರು.


ಈ ಮನವಿಗೆ ಸ್ಪಂದಿಸಿದರುವ ಮುಜರಾಯಿ ಇಲಾಖೆ ದೇವಸ್ಥಾನಕ್ಕೆ , ಭಕ್ತರಿಗೆ, ಅರ್ಚಕರಿಗೆ ಯಾವುದೇ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ದೇವಾಲಯದಲ್ಲಿ ಇನ್ಮುಂದೆ ಮದ್ವೆ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ. ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟರ್ ಆಗಿ 30 ದಿನಗಳ ಬಳಿಕ ದೇವಾಲಯದಲ್ಲಿ ಮದುವೆ ಆಗುವುದಕ್ಕೆ ಅವಕಾಶ ನೀಡುತ್ತದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ