ರಾತ್ರಿ ನಿದ್ರೆ ಬರುವುದಿಲ್ಲವೆಂದು ನಿದ್ರೆ ಮಾತ್ರೆ ಬಳಸುವ ಬದಲು ಈ ಮನೆ ಮದ್ದನ್ನು ಬಳಸಿ
ಬುಧವಾರ, 21 ನವೆಂಬರ್ 2018 (08:00 IST)
ಬೆಂಗಳೂರು : ಹೆಚ್ಚಿನವರು ರಾತ್ರಿ ವೇಳೆ ನಿದ್ರೆ ಬರುವದಿಲ್ಲವೆಂದು ಚಿಂತಿಸುತ್ತಾರೆ. ಅದಕ್ಕಾಗಿ ನಿದ್ರೆ ಮಾತ್ರೆಗಳನ್ನು ಸೇವಿಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ತುಂಬಾ ಅಪಾಯ. ಅಂತವರು ನಿದ್ರೆ ಮಾತ್ರೆ ಬಳಸುವ ಬದಲು ಈ ಮನೆಮದ್ದನ್ನು ಬಳಸಿ.
ಶುದ್ಧ ಎಳ್ಳೆಣ್ಣೆ 50 ಗ್ರಾಂ ತೆಗೆದುಕೊಂಡು ಒಂದು ಪಾತ್ರೆಗೆ ಹಾಕಿಕೊಂಡು ಸ್ವಲ್ಪ ಬಿಸಿ ಮಾಡಿ ಅದನ್ನು ಕೆಳಗಿಳಿಸಿ ಅದಕ್ಕೆ ಸ್ವಲ್ಪ ಕರ್ಪೂರ ಹಾಕಿ ಮಿಕ್ಸ್ ಮಾಡದಾಗ ಕರ್ಪೂರ ಕರಗುತ್ತದೆ. ಇದನ್ನು ಒಂದು ಗಾಜಿನ ಬಾಟಲ್ ನಲ್ಲಿ ಸ್ಟೋರ್ ಮಾಡಿ ಇಡಿ. ಪ್ರತಿದಿನ ರಾತ್ರಿ ಪಾದವನ್ನು ಚೆನ್ನಾಗಿ ತೊಳೆದು ಒರೆಸಿಕೊಂಡು ಈ ಎಣ್ಣೆಯನ್ನು ಪಾದಕ್ಕೆ ಹಾಕಿ ಚೆನ್ನಾಗಿ 5 ನಿಮಿಷ ಮಸಾಜ್ ಮಾಡಿ ಕಾಲಿಗೆ ಸಾಕ್ಸ್ ಹಾಕಿಕೊಳ್ಳಬೇಕು. ಹೀಗೆ ಮಾಡಿದ್ರೆ ಪ್ರತಿದಿನ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ.
ಇನ್ನೊಂದು ಮನೆಮದ್ದು 200ಎಂಎಲ್ ಹಾಲನ್ನು ಉಗುರು ಬೆಚ್ಚಗೆ ಮಾಡಿಕೊಂಡು ಅದಕ್ಕೆ 1 ಟೀ ಚಮಚ ಅಶ್ವಗಂಧ ಪೌಡರ್ ಹಾಗೂ 1 ಟೀ ಚಮಚ ಕಲ್ಲುಸಕ್ಕರೆ ಹಾಕಿ ಮಿಕ್ಸ್ ಮಾಡಿ ರಾತ್ರಿ ಊಟ ಆದ ಮೇಲೆ ಕುಡಿಯಿರಿ.(ಶುಗರ್ ಇರುವವರು ಕಲ್ಲುಸಕ್ಕರೆ ಉಪಯೋಗಿಸಬೇಡಿ). ಒಂದು ವೇಳೆ ಅಶ್ವಗಂಧ ಪೌಡರ್ ಸಿಗದಿದ್ದರೆ, 200ಎಂಎಲ್ ಉಗುರು ಬೆಚ್ಚಗಿನ ಹಾಲಿಗೆ 2-3 ಟಿ ಚಮಚ ಬೆಲ್ಲ ಹಾಕಿಕೊಂಡು ಕುಡಿಯಿರಿ. ಬೆಲ್ಲ ಇಷ್ಟವಿಲ್ಲದವರು ಅದರ ಬದಲು 1 ಟೀ ಚಮಚ ಜೇನುತುಪ್ಪ ಬಳಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.