ಪುರುಷರಿಗಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಈ ಗರ್ಭ ನಿರೋಧಕ ಇಂಜೆಕ್ಷನ್‌

ಶುಕ್ರವಾರ, 10 ಮೇ 2019 (09:02 IST)
ಬೆಂಗಳೂರು : ಬೇಡವಾದ ಗರ್ಭ ಧರಿಸದಿರಲು ಮಹಿಳೆಯರಿಗೆ ಅನೇಕ ಮಾರ್ಗಗಳಿವೆ. ಆದರೆ ಪುರುಷರಿಗೆ ಮಾತ್ರ ಗರ್ಭ ನಿರೋಧಕ ಆಪರೇಷನ್ ಮಾಡಿಸಿಕೊಳ್ಳಬೇಕಾಗಿತ್ತು. ಆದರೆ ಇನ್ನುಮುಂದೆ ಅದರ  ಅಗತ್ಯವಿಲ್ಲ.




ಹೌದು. ಮಹಿಳೆಯರು ಬೇಡವಾದ ಗರ್ಭ ಧರಿಸದಿರಲು ಪುರುಷರಿಗಾಗಿ ಇದೀಗ ವಿಜ್ಞಾನಿಗಳು ರಿವರ್ಸಿಬಲ್ ಆಫ್ ಸ್ಪರ್ಮ್ ಅಂಡರ್ ಗೈಡೆನ್ಸ್ ಎಂಬ ಇಂಜೆಕ್ಷನ್ ನ್ನು ಕಂಡು ಹಿಡಿದಿದ್ದಾರೆ.  ಪುರುಷರು ಈ  ಗರ್ಭ ನಿರೋಧಕ ಇಂಜೆಕ್ಷನ್‌  ತೆಗೆದುಕೊಳ್ಳುವುದರಿಂದ ಫ್ಯಾಮಿಲಿ ಪ್ಲಾನಿಂಗ್ ಮಾಡಬಹುದು. ಈ ಇಂಜೆಕ್ಷನ್‌ ನಿಂದ 13 ವರ್ಷಗಳ ಕಾಲ ಗರ್ಭ ಧರಿಸುವ ಸಾಧ್ಯತೆ ಇರುವುದಿಲ್ಲ. ಇಂಥ ಔಷಧಿಗಳು ಮಾರುಕಟ್ಟೆಗೆ ಬಂದಿದ್ದು, ಪರಿಣಾಮಕಾರಿಯಾಗಿರುವುದಲ್ಲದೇ, ಸುರಕ್ಷಿತವೂ ಹೌದು ಎನ್ನಲಾಗುತ್ತಿದೆ. 


ಇಲ್ಲಿವರೆಗೂ ಇಲಿ, ಮೊಲ ಮತ್ತು ಇತರ ಪ್ರಾಣಿಗಳ ಮೇಲೆ ಈ ಔಷಧಿಯನ್ನು ಪ್ರಯೋಗಿಸಲಾಗಿದೆ. ಅಲ್ಲದೇ 303 ಪುರುಷರ ಮೇಲೂ ಪ್ರಯೋಗ ನಡೆದಿದ್ದು, ಇದೀಗ ಕ್ಲಿನಿಕಲ್ ಟೆಸ್ಟ್ ಮಾಡಲಾಗುತ್ತಿದೆ. ಇದರಲ್ಲಿ ಶೇ. 97.3 ಇಂಜೆಕ್ಷನ್ ಆ್ಯಕ್ಟಿವ್ ಆಗಿ ಕೆಲಸ ಮಾಡಿದೆ. ಅಲ್ಲದೆ  ಶೇ.99.2 ಗರ್ಭ ತಡೆಯಲು ಸಹಕರಿಸುತ್ತದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ