ಇದೇನಿದು ವಿಚಿತ್ರ! ಮಳೆಗಾಗಿ ಪರಸ್ಪರ ಮದುವೆಯಾದ ಹುಡುಗರು

ಮಂಗಳವಾರ, 27 ಜೂನ್ 2023 (13:33 IST)
ಮಂಡ್ಯ : ಮಳೆಗಾಗಿ ಜನರು ವಿಶಿಷ್ಟ ಆಚರಣೆಗಳನ್ನು ಮಾಡುತ್ತಿದ್ದಾರೆ. ಮಳೆರಾಯ ಧರೆಗೆ ಇಳಿಯಪ್ಪ ಎಂದು ಕತ್ತೆಗಳ ಮದುವೆ, ಕಪ್ಪೆ ಮದುವೆ, ಮಣ್ಣಿನ ಗೊಂಬೆ ಮಾಡಿ ಅದನ್ನ ಮೆರವಣಿಗೆ ಮಾಡುವುದು ಹೀಗೆ ನಾನಾ ವಿದಧ ಆಚರಣೆಗಳನ್ನು ಮಾಡುತ್ತಿದ್ದಾರೆ.
 
ಅದೇರೀತಿಯಾಗಿ ಶುಕ್ರವಾರ (ಜೂ.24) ರಂದು ಕೆಆರ್ ಪೇಟೆ ತಾಲೂಕಿನ ಗಂಗನಹಳ್ಳಿಯಲ್ಲಿ ಗ್ರಾಮದ ಹುಡುಗರು ವಿಶಿಷ್ಟ ಆಚರಣೆ ಮಾಡಿದ್ದಾರೆ

ಮುಂಗಾರು ವಿಳಂಬದಿಂದ ಕರ್ನಾಟಕದ ಜನತೆ ಕಂಗಾಲ ಆಗಿದ್ದಾರೆ. ಈ ಋತುವಿನಲ್ಲಿ ಮುಂಗಾರು ಮಳೆಯ ಕೊರತೆಯಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಗಿ ಜನರು ವಿಶಿಷ್ಟ ಆಚರಣೆಗಳನ್ನು ಮಾಡುತ್ತಿದ್ದಾರೆ.

ಮಳೆರಾಯ ಧರೆಗೆ ಇಳಿಯಪ್ಪ ಎಂದು ಕತ್ತೆಗಳ ಮದುವೆ, ಕಪ್ಪೆ ಮದುವೆ, ಮಣ್ಣಿನ ಗೊಂಬೆ ಮಾಡಿ ಅದನ್ನ ಮೆರವಣಿಗೆ ಮಾಡುವುದು ಹೀಗೆ ನಾನಾ ವಿದಧ ಆಚರಣೆಗಳನ್ನು ಮಾಡುತ್ತಿದ್ದಾರೆ. ಅದೇರೀತಿಯಾಗಿ ಶುಕ್ರವಾರ (ಜೂ.24) ರಂದು ಕೆಆರ್ ಪೇಟೆ ತಾಲೂಕಿನ ಗಂಗನಹಳ್ಳಿಯಲ್ಲಿ ಗ್ರಾಮಸ್ಥರು ಇಬ್ಬರು ಗಂಡುಮಕ್ಕಳಿಗೆ ಮದುವೆ ಮಾಡಿಸಿದ್ದಾರೆ.

ಇದರಲ್ಲಿ ವಿಶೇಷ ಅಂದರೇ ಇದರಲ್ಲಿ ಒಬ್ಬ ಹುಡುಗ ವಧು ವೇಷ ಧರಿಸಿದ್ದು, ಇನ್ನೊಬ್ಬ ವರನ ವೇಷ ಧರಿಸಿ ಪರಸ್ಪರ ಮದುವೆಯಾಗಿದ್ದಾರೆ. ಮದುವೆ ಸಮಾರಂಭವನ್ನು ಸ್ಥಳೀಯ ಸಂಪ್ರದಾಯಗಳಿಗೆ ಅನುಗುಣವಾಗಿ ಮಾಡಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ