ಒಂದು ವರ್ಷದಿಂದ ಬೆದರಿಸಿ ಅತ್ಯಾಚಾರ ನಡೆಸುತ್ತಿದ್ದ ಕಾಮುಕರಿಬ್ಬರ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಗರಂ ಆಗಿದ್ದಾರೆ.
ಯುವತಿಯೊಬ್ಬಳ ಮೇಲೆ ಕಾಸರಗೋಡಿನಲ್ಲಿ ಯುವಕರಿಬ್ಬರು ಅತ್ಯಾಚಾರ ನಡೆಸುತ್ತಿದ್ದರು. ಬೆಂಗಳೂರಿಗೂ ಕರೆದುಕೊಂಡು ಬಂದು ಅತ್ಯಾಚಾರ ನಡೆಸಿದ್ದಾರೆ.
ಅಲ್ಲದೇ ಅತ್ಯಾಚಾರಕ್ಕೆ ಒಳಗಾದ ಯುವತಿಯನ್ನು ಮುಸ್ಲಿಂ ಆಗಿ ಮತಾಂತರಗೊಳ್ಳುವಂತೆ ಆರೋಪಿಗಳು ಒತ್ತಾಯ ಮಾಡುತ್ತಿದ್ದರು ಎಂದು ದೂರಿದ್ದಾರೆ.
ಕಾಮುಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆಯೊಂದಿಗೆ ಆಗಮಿಸಿ ಬೆಂಗಳೂರು ಕಮೀಷನರ್ ಗೆ ದೂರು ದಾಖಲು ಮಾಡಿದ್ದಾರೆ.