ಸಾರಿಗೆ ನೌಕರರ ಮುಷ್ಕರ: ಬೇಜವಾಬ್ದಾರಿ ಹೇಳಿಕೆ ನೀಡಿದ ಸಚಿವ ರಾಮಲಿಂಗಾರೆಡ್ಡಿ

ಬುಧವಾರ, 27 ಜುಲೈ 2016 (13:09 IST)
ನಾಳೆಯೂ ಸಾರಿಗೆ ನೌಕರರ ಮುಷ್ಕರ ನಡೆದರೇ ನಾನೇನು ಮಾಡಲಾಗುವುದಿಲ್ಲ ಎಂದು ಸಾರಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.
 
ಶಾಂತಿ ನಗರದಲ್ಲಿರುವ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ನೌಕರರ ವೇತನವನ್ನು ಶೇ 10ಕ್ಕಿಂತ ಹೆಚ್ಚು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ಸಾರಿಗೆ ನೌಕರರ ಮನವೊಲಿಸುವ ಯತ್ನಿಸುತ್ತೇವೆ. ಸಾರಿಗೆ ನೌಕರರ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಅರ್ಥೈಸಿಕೊಳ್ಳಬೇಕು ಎಂದು ತಿಳಿಸಿದರು.
 
ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಸಂಬಂಧಿಸಿದಂತೆ ಸಾರಿಗೆ ನೌಕರರು ಮನಸ್ಸು ಮಾಡಿದರೆ ಅರ್ಧ ಗಂಟೆಯಲ್ಲೇ ಸಮಸ್ಯೆ ಬಗೆಹರಿಯುತ್ತದೆ ಎಂದು ತಿಳಿಸಿದ್ದಾರೆ.
 
ಸಾರಿಗೆ ನೌಕರರ ವೇತನ ಕುರಿತು ಬೇಡಿಕೆ ಮಾತ್ರ ಈಡೇರಿಸಬೇಕಾಗಿದೆ. ಮಿಕ್ಕೆಲ್ಲ ಬೇಡಿಕೆಗಳು ಸಹಜವಾಗಿಯೇ ಈಡೇರಲಿದೆ. ಸಾರಿಗೆ ನೌಕರರ ವೇತನವನ್ನು 10 ಪ್ರತಿಶತ ಹೆಚ್ಚಳ ಮಾಡಿದರೆ ವರ್ಷಕ್ಕೆ 1560 ಕೋಟಿ ಬೇಕಾಗುತ್ತದೆ. ಸಾರಿಗೆ ನೌಕರರ ಬೇಡಿಕೆಯಂತೆ 35 ಪ್ರತಿಶತ ವೇತನ ಹೆಚ್ಚಿಸಿದರೆ 4150 ಕೋಟಿ ಹೊರೆಯಾಗುತ್ತದೆ ಎಂದು ತಿಳಿಸಿದರು.
 
ಸಾರಿಗೆ ನೌಕರರ ಸಂಘಟನೆಗಳು 30 ರಿಂದ 35 ಪ್ರತಿಶತ ವೇತನ ಹೆಚ್ಚಳ ಮಾಡುವಂತೆ ಬೇಡಿಕೆ ಇಟ್ಟಿವೆ. ಈಗಾಗಲೇ ಸಾರಿಗೆ ಇಲಾಖೆ ಸಾಲದ ಹೊರೆಯಲ್ಲಿದೆ. ಹಂತ ಹಂತವಾಗಿ ಅದು ಕಡಿಮೆಯಾಗುತ್ತಿದೆ. ಸಾರಿಗೆ ನೌಕರರ ಸಂಘಟನೆಗಳೊಂದಿಗಿನ ಚರ್ಚೆ ಇನ್ನೂ ಅಂತಿಮವಾಗಿಲ್ಲ. ಸಾರಿಗೆ ನೌಕರರು ಮನಸ್ಸು ಮಾಡಿದರೆ ಅರ್ಧ ಗಂಟೆಯಲ್ಲೇ ಸಮಸ್ಯೆ ಬಗೆಹರಿಯುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ