ಹೊಸ ಉದ್ಯಮಕ್ಕೆ ಕೈ ಹಾಕಿದ ಭಟ್ 'ಎನ್' ಭಟ್ ಖ್ಯಾತಿಯ ಅವಳಿ ಸಹೋದರರು

Sampriya

ಮಂಗಳವಾರ, 30 ಜುಲೈ 2024 (17:22 IST)
Photo Courtesy X
ಮಂಗಳೂರು: ವಿಭಿನ್ನ ನಿರೂಪಣಾ ಶೈಲಿ, ಶುದ್ಧ ಸಸ್ಯಹಾರಿ ಅಡುಗೆಗಳನ್ನು ಮಾಡುತ್ತಾ ಖ್ಯಾತಿ ಗಳಿಸಿದ 'ಭಟ್‌ ಎನ್ ಭಟ್' ಯೂಟ್ಯೂಬ್ ಚಾನೆಲ್‌ನ ಅವಳಿ ಸಹೋದರರು ಇದೀಗ ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ. ಯೂಟ್ಯೂಬ್‌ನಲ್ಲಿ ಸಕ್ಸಸ್ ಆದ ಬೆನ್ನಲ್ಲೇ ಈ ಸಹೋದರರು ತಾವು ತಯಾರಿಸುವ ಉಪ್ಪಿನಕಾಯಿ ಹಾಗೂ ಸಾಂಬಾರ್ ಪೌಡರ್‌ನ ಮಾರಾಟಕ್ಕೆ ಹೊಸ ಅಂಗಡಿಯನ್ನು ತೆರೆದಿದ್ದಾರೆ.

ಕೊರೊನಾ ಸಂಕಷ್ಟದಲ್ಲಿ ಕರ್ನಾಟಕ ಕೇರಳ ಗಡಿ ಜಿಲ್ಲೆಯವರಾಗಿರುವ ಸುದರ್ಶನ್ ಭಟ್ ಮತ್ತು ಮನೋಹರ ಭಟ್ ಬೆದ್ರಡಿ ತಮ್ಮ ಮನೆಯ ಸುತ್ತಾ ಮುತ್ತಾ ಸಿಗುವ ತರಕಾರಿಗಳನ್ನು ಬಳಸಿ ಅಡುಗೆ ಮಾಡಿ ಯೂಟ್ಯೂಬ್‌ ಆರಂಭಿಸಿದರು. ಇವರ ವಿಭಿನ್ನವಾದ ನಿರೂಪಣೆ, ಪಕ್ಕಾ ಕರಾವಳಿ ಶೈಲಿಯ ಅಡುಗೆಗಳು ತುಂಬಾನೇ ಖ್ಯಾತಿ ತಂದುಕೊಟ್ಟಿತು. ತಮ್ಮ ಅಡುಗೆ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.

ಇವರು ವೃತ್ತಿಯಲ್ಲಿ ವಕೀಲರಾಗಿದ್ದು, ಪ್ರವೃತ್ತಿಯಾಗಿ ಅಡುಗೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಈ ಅವಳಿ ಸಹೋದರರು ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಇಷ್ಟರವರೆಗೆ ಅಡುಗೆ ಮಾಡಿ ಬಡಿಸುತ್ತಿದ್ದ ಈ ಸಹೋದರರು ಇದೀಗ ಉಪ್ಪಿನಕಾಯಿ ಮತ್ತು ಸಾಂಬಾರ್ ಪೌಡರ್ ಸಿದ್ಧ ಮಾಡಿ ಮಾರಾಟಕ್ಕೆ ಇಟ್ಟಿದ್ದಾರೆ.  ಕಾಸರಗೋಡಿನ ಸೀತಂಗೋಳಿ  ಮುಕರಿಕಂಡ ಬಳಿ ಇವರು 'ಭಟ್ ಎನ್ ಭಟ್' ಅಂಗಡಿ ತೆರೆದಿದ್ದಾರೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ