ಕೊಳವೆಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು: ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಬುಧವಾರ, 12 ಏಪ್ರಿಲ್ 2017 (12:56 IST)
ಕೊಳವೇ ಬಾವಿ ರೀಬೋರಿಂಗ್ ವೇಳೆ ಮಣ್ಣು ಕುಸಿದು ಇಬ್ಬರು ಕೊಳವೆ ಬಾವಿಗೆ ಬಿದ್ದಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ನಡೆದಿದೆ. ಜಮೀನಿನಲ್ಲಿ ಬತ್ತಿಹೋಗಿದ್ದ ಕೊಳವೆ ಬಾವಿಯಲ್ಲಿ ರೀಬೋರಿಂಗ್ ಕಾರ್ಯ ನಡೆಯುತ್ತಿತ್ತು, ಈ ಸಂದರ್ಭ ಶಂಕರಪ್ಪ ಮತ್ತು ಬಸವರಾಜು ಮಣ್ಣು ಕುಸಿದ ಪರಿಣಾಮ ಕೊಳವೆಬಾವಿಯಲ್ಲಿ ಸಿಲುಕಿದ್ದಾರೆ.

30 ಅಡಿಯ ಆಳದಲ್ಲಿ ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ನಡೆದಿದೆ. ಜೆಸಿಬಿ ಇನ್ನಿತರೆ ಉಪಕರಣಗಳನ್ನ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. 50 ಅಧಿಕ ಮಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಮಣ್ಣು ಸಡಿಲವಾಗಿರುವ ಕಾರಣ ಸಮೀಪಕ್ಕೆ ಯಾರನ್ನೂ ಬಿಡುತ್ತಿಲ್ಲ.

ಈಗ ಕೊಳವೆಬಾವಿಯಲ್ಲಿ ಸಿಲುಕಿರುವ ಶಂಕರಪ್ಪ ಎಂಬುವವರ ಜಮೀನಿನಲ್ಲೇ ನಡೆದಿರುವ ಘಟನೆ ಇದು. 30 ವರ್ಷದ ಪ್ರಾಯದ ಶಂಕರಪ್ಪಗೆ 3 ಮಕ್ಕಳಿದ್ದಾರೆ. 

ವೆಬ್ದುನಿಯಾವನ್ನು ಓದಿ