ಇಂದಿರಾನಗರದಲ್ಲಿ ಯು.ಎಸ್. ಪೋಲೋ ಅಸೋಸಿಯೇಷನ್ ಹೊಸ ಮಳಿಗೆ ಪ್ರಾರಂಭ
ಬೆಂಗಳೂರು: ಜಾಗತಿಕ ಖ್ಯಾತಿ ಯುನೈಟೆಡ್ ಸ್ಟೇಟ್ಸ್ ಪೋಲೋ ಅಸೋಸಿಯೇಷನ್(ಯು.ಎಸ್.ಪಿ.ಎ)ಯ ಭಾರತದ ಮುಂಚೂಣಿಯ ಕ್ಯಾಶುಯಲ್ ವೇರ್ ಬ್ರಾಂಡ್ ತನ್ನ ಹೊಸ ಬ್ರಾಂಡ್ ಮಳಿಗೆಯನ್ನು ಬೆಂಗಳೂರಿನ ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಪ್ರಾರಂಭಿಸಿದೆ.
4168 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಬ್ರಾಂಡ್ ಮಳಿಗೆ 2 ಮಹಡಿಗಳಿಗೆ ವಿಸ್ತರಿಸಿದ್ದು ಭಾರತದಲ್ಲಿ ಯು.ಎಸ್. ಪೋಲೋ ಅಸೋಸಿಯೇಷನ್ ರೀಟೇಲ್ ವ್ಯಾಪ್ತಿಯನ್ನು ಪರಿವರ್ತಿಸುವ ಗುರಿ ಹೊಂದಿದ್ದು ಗ್ರಾಹಕರಿಗೆ ಈ ಪ್ರಮುಖ ಮತ್ತು ಸಕ್ರಿಯ ಬ್ರಾಂಡ್ ಕಥೆಯ ಭಾಗವಾಗಲು ಆಹ್ವಾನಿಸುತ್ತದೆ.
ಪೋಲೋ ಕ್ರೀಡೆಯೊಂದಿಗೆ ಅಧಿಕೃತ ಸಂಪರ್ಕ ಹೊಂದಿರುವ ಈ ಬ್ರಾಂಡ್ ನ ಹೊಸ ರೀಟೇಲ್ ತಾಣವು ಆಧುನಿಕ ಅಲಂಕರಣ ಮತ್ತು ಕ್ರೀಡಾ-ಸ್ಫೂರ್ತಿಯ ಫ್ಯಾಷನ್ ಮತ್ತು ಅಕ್ಸೆಸರಿಗಳನ್ನು ಹೊಂದಿದ್ದು ಅದು ಗ್ರಾಹಕರಿಗೆ ಅವರ ಶಾಪಿಂಗ್ ಅನುಭವದಲ್ಲಿ ಬ್ರಾಂಡ್ ಇಡಿಯಾದ ಪರಿಚಯ ಮಾಡಿಸುತ್ತದೆ. ಈ ಮಳಿಗೆಯಲ್ಲಿ ಅಧಿಕೃತ, ಆಧುನಿಕ ಮತ್ತು ಬ್ರಾಂಡ್ ಹೊಂದಿರುವ ಕ್ರೀಡಾ ಅಂಶಗಳು ಉತ್ಪನ್ನವನ್ನು ಕೇಂದ್ರವಾಗಿಟ್ಟುಕೊಂಡು ಫ್ಯಾಷನ್ ಮತ್ತು ಸ್ಟೈಲ್ ಅನ್ನು ಪ್ರದರ್ಶಿಸುತ್ತವೆ. ಈ ಮಳಿಗೆಯು ಪೋಲೋ ಕ್ರೀಡೆಯ ಸ್ಫೂರ್ತಿಯನ್ನು ಬಿಂಬಿಸುವ ಕ್ಲಾಸಿಕ್ ಮತ್ತು ಕೂಲ್ ಎಂಬ ವಿಶೇಷ ಗೋಡೆಯನ್ನೂ ಹೊಂದಿದೆ. ಈ ಹೊಸ ಮಳಿಗೆಯು ಬ್ರಾಂಡ್ ನ ಪ್ರಗತಿಯ ಕಾರ್ಯತಂತ್ರದ ಭಾಗವಾಗಿದ್ದು ಅದು ಭೌತಿಕ, ಆಮ್ನಿಚಾನೆಲ್ ಮತ್ತು ಇ-ಕಾಮರ್ಸ್ ಮಳಿಗೆಗಳಿಗೆ ಸಮಾನ ಆದ್ಯತೆ ನೀಡುತ್ತದೆ.
100 ಅಡಿ ರಸ್ತೆಯಲ್ಲಿರುವ ಯು.ಎಸ್. ಪೋಲೋ ಅಸೋಸಿಯೇಷನ್ ಮಳಿಗೆಯು ಬ್ರಾಂಡ್ ಒದಗಿಸುವ ಯು.ಎಸ್.ಪಿ.ಎ ಮೈನ್ಲೈನ್, ಯು.ಎಸ್.ಪಿ.ಎ ಸ್ಪೋರ್ಟ್, ಡೆನಿಮ್ ಅಂಡ್ ಕೊ, ವಿಮೆನ್ಸ್ ವೇರ್, ಫುಟ್ವೇರ್, ಕಿಡ್ಸ್ ವೇರ್, ಅಕ್ಸೆಸರಿಗಳು ಮತ್ತು ಒಳ ಉಡುಪುಗಳನ್ನು ಒಳಗೊಂಡಿವೆ. ಪೋಲೋ ಶರ್ಟ್ ಗಳು, ಡೆನಿಮ್ ಗಳು, ಶರ್ಟ್ ಗಳು, ಚಿನೊಗಳು ಮತ್ತು ಟಿ-ಶರ್ಟ್ ಗಳು ಅಲ್ಲಿನ ಸಮಯರಹಿತ ಅಚ್ಚುಮೆಚ್ಚಿನ ಸಂಗ್ರಹಗಳಲ್ಲಿ ಕೆಲವಾಗಿವೆ. ಇದು ಭಾರತದಲ್ಲಿ ಎರಡನೆಯ ವಿಶೇಷ ಬ್ರಾಂಡ್ ಮಳಿಗೆಯಾಗಿದ್ದು ಹಿಂದೆ ಆನ್ಲೈನ್ ನಲ್ಲಿ ಮಾತ್ರ ಲಭ್ಯವಿದ್ದ ಹೊಸ ಎಸ್.ಎಸ್.24 ವಿಮೆನ್ಸ್ ವೇರ್ ಸಂಗ್ರಹವನ್ನು ಲೈವ್-ಇನ್ ಸ್ಟೋರ್ ನಲ್ಲಿ ಪಡೆಯಬಹುದು.
ಈ ಮಳಿಗೆ ಪ್ರಾರಂಭ ಕುರಿತು ಭಾರತದ ಪೋಲೋ ಅಸೋಸಿಯೇಷನ್ ಸಿಇಒ ಅಮಿತಾಭ್ ಸುರಿ, “ಇಂದಿರಾನಗರದಲ್ಲಿರುವ ನಮ್ಮ ಮಳಿಗೆಯು ಬರೀ ಭೌತಿಕ ಮಳಿಗೆಯ ವಿಸ್ತರಣೆಯಲ್ಲ, ಇದು ಬೆಂಗಳೂರಿನ ಗ್ರಾಹಕರಿಗೆ ಸ್ಟೇಟ್ ಮೆಂಟ್ ಮತ್ತು ವಿನೂತನ ಅನುಭವವಾಗಿದೆ. ಇದು ಈ ಕ್ರೀಡೆಯಷ್ಟೇ ಖ್ಯಾತಿ ಪಡೆದ ಯು.ಎಸ್.ಪೋಲೋ ಅಸೋಸಿಯೇಷನ್ ಪರಿಣಿತಿ ಮತ್ತು ಭಾರತೀಯ ಅಭಿಮಾನಿಗಳ ಕುರಿತು ಅಪಾರವಾಗಿ ಹೇಳುತ್ತದೆ. ಬೆಂಗಳೂರು ಕಳೆದ ಕೆಲ ವರ್ಷಗಳಿಂದ ಯು.ಎಸ್.ಪಿ.ಎ.ಗೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದ್ದು ಹೆಚ್ಚು ಮಳಿಗೆಗಳನ್ನು ತೆರೆಯಲು ಇದನ್ನು ಪರಿಪೂರ್ಣ ಆಯ್ಕೆಯಾಗಿಸಿದೆ. ಇಂದಿರಾನಗರ ನಗರದ ಅತ್ಯಂತ ಚಟುವಟಿಕೆಯ ತಾಣವಾಗಿದೆ. ನಾವು ಭಾರತೀಯ ಗ್ರಾಹಕರು ತಮ್ಮಜಾಗತಿಕ ಸಹವರ್ತಿಗಳಂತೆ ಹೊಂದಿರುವ ವಿಸ್ತಾರಗೊಳ್ಳುತ್ತಿರುವ ಫ್ಯಾಷನ್ ಆದ್ಯತೆಗಳಿಗೆ ಪೂರೈಸಲು ಶ್ರಮಿಸುತ್ತಿದ್ದೇವೆ” ಎಂದರು.
ಪ್ರಸ್ತುತ ಭಾರತದಲ್ಲಿ ಬ್ರಾಂಡ್ ರೀಟೇಲ್ ವ್ಯಾಪ್ತಿಯಲ್ಲಿ 400ಕ್ಕೂ ಹೆಚ್ಚು ಬ್ರಾಂಡ್ ಮಳಿಗೆಗಳು ಮತ್ತು ಭಾರತದಲ್ಲಿ 200ಕ್ಕೂ ಹೆಚ್ಚು ನಗರಗಳಲ್ಲಿ ಶಾಪ್-ಇನ್-ಶಾಪ್ ಹೊಂದಿದೆ.