ಕನ್ನಡದ ಕಗ್ಗೊಲೆ ಮಾಡಿದ ವಿಶ್ವವಿದ್ಯಾಲಯ?

ಮಂಗಳವಾರ, 30 ಏಪ್ರಿಲ್ 2019 (17:44 IST)
ವಿಶ್ವವಿದ್ಯಾಲಯವೊಂದರ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡದ ಕಗ್ಗೊಲೆ ಮಾಡಿರುವ ಆರೋಪ ಕೇಳಿಬಂದಿದೆ.

ಕರ್ನಾಟಕ ವಿಶ್ವವಿದ್ಯಾಲಯದ ಪ್ರಶ್ನೆಪತ್ರಿಕೆಯಲ್ಲಿ ಕನ್ನಡದ ಮತ್ತೆ ಕಗ್ಗೊಲೆ ನಡೆದಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಶೈಕ್ಷಣಿಕ ತಂತ್ರಜ್ಞಾನ ಪತ್ರಿಕೆಯಲ್ಲಿಯಲ್ಲಿ 16 ಕ್ಕೂ ಹೆಚ್ಚು ಕನ್ನಡ ಮತ್ತು ಇಂಗ್ಲಿಷ್ ದೋಷಗಳು ಕಾಣಿಸಿಕೊಂಡಿವೆ. ಕವಿವಿ ವ್ಯಾಪ್ತಿಯ ಬಿಇಡಿ 2 ನೇ ಸೆಮಿಸ್ಟರ್  ಪರೀಕ್ಷೆಯಲ್ಲಿ ಈ ಘಟನೆ ನಡೆದಿದೆ.

ಮೊಬೈಲ್ ಬದಲಾಗಿ ಮೊಬ್ಬಲ- ಅನುಕೂಲಗಳನ್ನು ಬದಲಾಗಿ ಅನೂಕುಲಗಳನ್ನು- ಟೆಲಿಕಾನ್ಪರೆನ್ಸ್ ಬದಲಾಗಿ ಟೆಲೆಕಾನ್ಪಲೆನ್ಸ್, ಸಂಕ್ಷಿಪ್ತ ಬದಲಾಗಿ ಸಂಕೀಪ್ತ ದೃಕ್ ಬದಲಾಗಿ ದೃಡ ಸೇರಿದಂತೆ ಇನ್ನು ಅನೇಕ ಶಬ್ದಗಳು ದೋಷಗಳಿಂದ ಕೂಡಿವೆ.

ದೋಷ ಕುರಿತು ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ. ಮೇ 6 ರಂದು ಕರ್ನಾಟಕ ವಿವಿ ಪರೀಕ್ಷಾ ಮಂಡಳಿ ಸಭೆ ನಿಗದಿಯಾಗಿದೆ. ರಾಜ್ಯದ ಪ್ರತಿಷ್ಠಿತ ವಿವಿಗಳಲ್ಲಿ ಒಂದಾಗಿರೋ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎರಡು ದಿನಗಳ ಹಿಂದೆ ನಡೆದ ಪರೀಕ್ಷೆಯಲ್ಲಿ ಸಹ ದೋಷಗಳು ಕಂಡು ಬಂದಿದ್ದವು. ವಿವಿ ಅಧೀನದ ಬಿಎಡಿ ಪ್ರಶ್ನೆಪತ್ರಿಕೆಯಲ್ಲಿ ಕನ್ನಡ ಕಗ್ಗೊಲೆ ಮಾಡಲಾಗಿತ್ತು ಎಂದು ಪರೀಕ್ಷಾರ್ಥಿಗಳು ದೂರಿದ್ದಾರೆ.  

ಬಿಇಡಿ ಪದವಿಯ ಸಮನ್ವಯ ಶಿಕ್ಷಣ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ ಸಹ ದೋಷಗಳು ಕಂಡುಬಂದಿವೆ. ಪ್ರಶ್ನೆ ಪತ್ರಿಕೆಯಲ್ಲಿ ದೋಷಗಳನ್ನು ನೋಡಿ ವಿದ್ಯಾರ್ಥಿಗಳು ದಂಗಾಗಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ